ಡೇವಿಸ್ ಕಪ್‌ ಟೆನಿಸ್‌: 14ರಂದು ವೇಳಾಪಟ್ಟಿ ಪ್ರಕಟ ಬೆಂಗಳೂರು: ಹೊಸ ನಿಯಮದಡಿ ನಡೆಯಲಿರುವ ಮೊದಲ ಡೇವಿಸ್ ಕಪ್ ಟೆನಿಸ್ ಟೂರ್ನಿಯ ವೇಳಾಪಟ್ಟಿ ಫೆಬ್ರುವರಿ 14ರಂದು ಮ್ಯಾಡ್ರಿಡ್‌ ನಗರದಲ್ಲಿ ಬಿಡಗಡೆಯಾಗಲಿದೆ. ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸುವ 18 ತಂಡಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿನ ವಿಜೇತ ತಂಡ ಸುಲಭವಾಗಿ ನಾಕ್ ಔಟ್ ಹಂತ ಪ್ರವೇಶಿಸಲಿದೆ. ಕಳೆದ ಬಾರಿ ಕ್ರೊವೇಷಿಯಾ ಪ್ರಶಸ್ತಿ ಗೆದ್ದಿದ್ದು ಫ್ರಾನ್ಸ್ ರನ್ನರ್ ಅಪ್ ಆಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.