ನಡಾಲ್‌ ಮುನ್ನಡೆ ಇಂಡಿಯನ್ ವೆಲ್ಸ್‌, ಅಮೆರಿಕ: ಹಿಂದಿನ ಚಾಂಪಿಯನ್‌ಗಳಾದ ರಫೆಲ್ ನಡಾಲ್‌ ಮತ್ತು ರೋಜರ್ ಫೆಡರರ್ ಅವರು ಇಲ್ಲಿ ನಡೆಯುತ್ತಿರುವ ಇಂಡಿಯನ್‌ ವೆಲ್ಸ್‌ ಟೆನಿಸ್ ಟೂರ್ನಿಯಲ್ಲಿ ಸೋಮವಾರ ಜಯ ಗಳಿಸಿದರು. ವಿಶ್ವ ಕ್ರಮಾಂಕದ ಮೂರನೇ ಸ್ಥಾನದಲ್ಲಿರುವ ನಡಾಲ್‌ ಅಮೆರಿಕದ ಜೇರ್ಡ್‌ ಡೊನಾಲ್ಡ್ಸನ್‌ ಎದುರು 6–1, 6–1ರಿಂದ ಗೆದ್ದು ಮೂರನೇ ಸುತ್ತಿಗೆ ಲಗ್ಗೆ ಇರಿಸಿದರು. ಅವರು ಈ ಹಿಂದೆ ಮೂರು ಬಾರಿ ಪ್ರಶಸ್ತಿ ಗೆದ್ದಿದ್ದರು. ಏಕಪಕ್ಷೀಯವಾಗಿದ್ದ ಪಂದ್ಯದಲ್ಲಿ ನಡಾಲ್ 72 ನಿಮಿಷಗಳಲ್ಲಿ ಎದುರಾಳಿಯನ್ನು ಸೋಲಿಸಿದರು. ಫೆಡರರ್‌, ನಿಶಿಕೋರಿಗೆ ಕಠಿಣ ಸವಾಲು: ರೋಜರ್ ಫೆಡರರ್‌ ಜರ್ಮನಿಯ ಪೀಟರ್‌ ಗೊಜೊಸಿಕ್ ಅವರನ್ನು 6–1, 7–5ರಿಂದ ಮಣಿಸಿದರು. . ಜಪಾನ್‌ನ ಆಟಗಾರ ಕೀ ನಿಶಿಕೋರಿ 6-4, 4-6, 7-6ರಲ್ಲಿ ಫ್ರಾನ್ಸ್‌ನ ಅಡ್ರಿಯನ್ ಮನಾರಿಯೊ ಅವರನ್ನು ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.