ಟೆನಿಸ್‌: ನಿಕ್ಷೇಪ್‌, ಪ್ರಜ್ವಲ್‌ಗೆ ಜಯ ಮೈಸೂರು: ಕರ್ನಾಟಕದ ಆಟಗಾರ ರಾದ ಬಿ.ಆರ್‌.ನಿಕ್ಷೇಪ್‌ ಮತ್ತು ಪ್ರಜ್ವಲ್‌ ದೇವ್‌ ಅವರು ಮೈಸೂರು ಟೆನಿಸ್‌ ಕ್ಲಬ್‌ ಕೋರ್ಟ್‌ನಲ್ಲಿ ನಡೆಯುತ್ತಿರುವ ಮೈಸೂರು ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಆರೆಂಜ್‌ ಸ್ಪೋರ್ಟ್ಸ್‌ ಮತ್ತು ಮೈಸೂರು ಟೆನಿಸ್‌ ಕ್ಲಬ್‌ ಆಶ್ರಯದಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಮಂಗಳವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನಿಕ್ಷೇಪ್ 6–1, 6–2 ರಲ್ಲಿ ಎ. ದೀಪಕ್‌ ಅವರನ್ನು ಮಣಿಸಿದರು. ಪ್ರಜ್ವಲ್‌ ದೇವ್ 7–5, 6–0 ರಲ್ಲಿ ಅಲೋಕ್‌ ಆರಾಧ್ಯ ವಿರುದ್ಧ ಜಯ ಸಾಧಿಸಿದರು. ದಿನದ ಇತರ ಪಂದ್ಯಗಳಲ್ಲಿ ರಿಷಿ ರೆಡ್ಡಿ 7–5, 6–3 ರಲ್ಲಿ ತೀರ್ಥ ಶಶಾಂಕ್‌ ವಿರುದ್ಧ; ಸುರೇಶ್‌ ದಕ್ಷಿಣ್ 6–2, 7–6 ರಲ್ಲಿ ಯಶ್‌ ಯಾದವ್ ವಿರುದ್ಧ; ವಿ.ವಿಘ್ನೇಶ್ 6–3, 3–6, 6–2 ರಲ್ಲಿ ಪ್ರಣೀತ್‌ ವಿರುದ್ಧ; ಅರ್ನವ್‌ ಪತಂಗೆ 6–2, 2–6, 6–4 ರಲ್ಲಿ ನೇಸರ್‌ ಜೆವೂರ್‌ ವಿರುದ್ಧ; ರಾಜನ್‌ ಗುಹನ್ 6–4, 6–2 ರಲ್ಲಿ ಅಮರನಾಥ್‌ ಅರೋರ ವಿರುದ್ಧ; ಜತಿನ್‌ ದಹಿಯಾ 6–3, 6–4 ರಲ್ಲಿ ಕೆ.ಕೈವಲ್ಯ ವಿರುದ್ಧ ಗೆದ್ದು ಎಂಟರ ಘಟ್ಟ ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.