ಟೆನಿಸ್‌: ಇಂಡಿಯಾನ ವೆಲ್ಸ್‌ಗೆ ಶರಪೋವಾ ಇಲ್ಲ ಇಂಡಿಯಾನ ವೆಲ್ಸ್‌ : ರಷ್ಯಾದ ಟೆನಿಸ್‌ ತಾರೆ ಮರಿಯಾ ಶರಪೋವಾ, ಮುಂದಿನ ತಿಂಗಳು ನಡೆಯುವ ಇಂಡಿಯಾನ ವೆಲ್ಸ್‌ ಟೂರ್ನಿಗೆ ಅಲಭ್ಯರಾಗಿದ್ದಾರೆ. ‘31 ವರ್ಷ ವಯಸ್ಸಿನ ಮರಿಯಾ, ಭುಜದ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಟೂರ್ನಿಯಲ್ಲಿ ಆಡುತ್ತಿಲ್ಲ. ಅವರ ಗೈರು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ’ ಎಂದು ಟೂರ್ನಿಯ ಸಂಘಟಕರು ಟ್ವೀಟ್‌ ಮಾಡಿದ್ದಾರೆ. ಶರಪೋವಾ, ಟೂರ್ನಿಯಿಂದ ಹಿಂದೆ ಸರಿದಿರುವ ಕಾರಣ ಜರ್ಮನಿಯ ಮೋನಾ ಬಾರ್ಥೆಲ್‌ಗೆ ಸಿಂಗಲ್ಸ್‌ ವಿಭಾಗದಲ್ಲಿ ಆಡುವ ಅವಕಾಶ ಸಿಕ್ಕಿದೆ. ಟೂರ್ನಿಯು ಮಾರ್ಚ್‌ 4ರಿಂದ 17ರವರೆಗೆ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.