ಜೂನಿಯರ್‌ ಡೇವಿಸ್‌ ಕಪ್‌ ತಂಡದಲ್ಲಿ ಅಜಯ್‌ಗೆ ಸ್ಥಾನ ನವದೆಹಲಿ: ಹರಿಯಾಣದ ಅಜಯ್‌ ಮಲಿಕ್‌ ಅವರು ಭಾರತದ ಜೂನಿಯರ್‌ ಡೇವಿಸ್‌ ಕಪ್‌ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ದಿವೇಶ್‌ ಗೆಹ್ಲೋಟ್‌, ಸುಶಾಂತ್‌ ದಬಾಸ್‌ ಮತ್ತು ಉದಿತ್‌ ಗೊಗೊಯ್‌ ಅವರೂ ತಂಡದಲ್ಲಿದ್ದಾರೆ. ಉದಿತ್‌, ಕಾಯ್ದಿರಿಸಿದ ಆಟಗಾರನಾಗಿದ್ದಾರೆ. ಭಾರತವು, ಥಾಯ್ಲೆಂಡ್‌ನಲ್ಲಿ ನಡೆಯುವ ಏಷ್ಯಾ ಒಸೀನಿಯಾ ಅರ್ಹತಾ ಹಂತದ ಪಂದ್ಯಗಳಲ್ಲಿ ಆಡಲಿದೆ. 16 ವರ್ಷದೊಳಗಿನವರ ರಾಷ್ಟ್ರೀಯ ರ‍್ಯಾಂಕಿಂಗ್‌ ಆಧಾರದಲ್ಲಿ ಅನಿಲ್‌ ಧೂಪರ್‌ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ತಂಡವನ್ನು ಆಯ್ಕೆ ಮಾಡಿದೆ. ಅಜಯ್‌, 2016ರ ಅಕ್ಟೋಬರ್‌ನಲ್ಲಿ ನಡೆದಿದ್ದ ಫೆನೆಸ್ಟಾ ಓಪನ್‌ ರಾಷ್ಟ್ರೀಯ ಚಾಂ‍ಪಿಯನ್‌ಷಿಪ್‌ನ 14 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದರು. ಭಕ್ತಿ ಶಾ, ಸುದಿಪ್ತಾ ಸೆಂಥಿಲ್‌ಕುಮಾರ್‌, ಸಂಜನಾ ಸಿರಿಮಾಲ ಮತ್ತು ಗಾರ್ಗಿ ಪವಾರ್‌ ಅವರು ಬಾಲಕಿಯರ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಗಾರ್ಗಿ ಅವರು ಕಾಯ್ದಿರಿಸಿದ ಆಟಗಾರ್ತಿಯಾಗಿದ್ದಾರೆ. ಡೇವಿಸ್‌ ಕಪ್‌ ಏಪ್ರಿಲ್‌ 8ರಿಂದ 13ರವರೆಗೆ ನಿಗದಿಯಾಗಿದೆ. ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.