ಟೆನಿಸ್‌: ಫೈನಲ್‌ಗೆ ಪ್ರವೇಶಿಸಿದ ಫೆಡರರ್‌ ಮಿಯಾಮಿ: ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿದ್ದು, ಸೆಮಿಫೈನಲ್‌ನಲ್ಲಿ ಕೆನಡಾದ ಶಪೊವಲೊವ್‌ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ನ ಹಣಾಹಣಿಯಲ್ಲಿ ಶಪೊವಲೊವ್‌ ವಿರುದ್ಧ 6-2, 6-4 ನೇರ ಸೆಟ್‌ಗಳಿಂದ ಮಣಿಸಿ ಫೈನಲ್‌ ಪ್ರವೇಶಿಸಿದರು. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಫೆಡರರ್‌ ಅವರು ಅಮೆರಿಕದ ಜಾನ್‌ ಐಸ್ನೆರ್‌ ಅವರನ್ನು ಎದುರಿಸಲಿದ್ದಾರೆ. ಸೆಮಿಸ್‌ನಲ್ಲಿ 19 ವರ್ಷದಶಪೊವ್‌ಲೆವ್‌ ಅವರನ್ನು ಮಣಿಸುವ ಮೂಲಕ ಮಿಯಾಮಿ ಟೆನಿಸ್‌ ಟೂರ್ನಿಯಲ್ಲಿ ರೋಜರ್‌ ಅವರು ಐದನೇ ಬಾರಿ ಫೈನಲ್‌ ಪ್ರವೇಶಿಸುತ್ತಿದ್ದಾರೆ. ವಿಶೇಷವೆಂದರೆ 20 ಬಾರಿ ಗ್ರ್ಯಾಂಡ್‌ಸ್ಲಾಮ್‌ ಗೆದ್ದಿರುವ ಫೆಡರರ್‌ 1999ರ ಮಾರ್ಚ್‌ನಲ್ಲಿ ಫ್ಲೋರಿಡಾ ಟೂರ್ನಮೆಂಟ್‌ ಮುಖಾಂತರ ಟೆನಿಸ್‌ಗೆ ಪ್ರವೇಶಿಸಿದ್ದ ವೇಳೆ ಶಪೊವ್‌ಲೆವ್‌ ಹುಟ್ಟಿರಲಿಲ್ಲ. ಕ್ವಾರ್ಟರ್‌ ಫೈನಲ್‌ ನಂತರ, ಸೆಮಿಫೈನಲ್ಲಿ ಫೆಡರರ್‌ ಕ್ರೀಡಾಬದುಕಿನಲ್ಲೇ ಅತ್ಯಂತ ಕಿರಿಯ ಆಟಗಾರರನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.