ಟೆನಿಸ್: ನಿನಾದ್–ಯಶ್‌ ಜೋಡಿ ರನ್ನರ್ಸ್ ಅಪ್ ಬೆಂಗಳೂರು: ರಾಜ್ಯದ ನಿನಾದ್ ರವಿ ಮತ್ತು ದೆಹಲಿಯ ಯಶ್‌ವರ್ಧನ್ ಸಿಂಗ್ ಹರಿಯಾಣದಲ್ಲಿ ನಡೆದ ಎಐಟಿಎ ಚಾಂಪಿಯನ್‌ಷಿಪ್ ಸರಣಿ ಟೆನಿಸ್ ಟೂರ್ನಿಯ 18 ವರ್ಷದೊಳಗಿನವರ ವಿಭಾಗದ ಡಬಲ್ಸ್‌ ವಿಭಾಗದಲ್ಲಿ ರನ್ನರ್ ಅಪ್ ಆದರು. ಕರ್ನಲ್‌ನ ಚಾಮುಂಡ ಟೆನಿಸ್ ಅಕಾಡೆಮಿ ಆವರಣದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಅವರು ಸ್ಥಳೀಯ ಆಟಗಾರರಾದ ಆಶಿಶ್‌ ಬಾವ್ರಾ ಮತ್ತು ರೋಹನ್ ಮಿತ್ರಾ ಎದುರು 4–6, 3–6ರಲ್ಲಿ ಸೋತರು. ಸೆಮಿಫೈನಲ್‌ನಲ್ಲಿ ನಿನಾದ್ –ಯಶ್‌ವರ್ಧನ್ ಜೋಡಿ ಹರಿಯಾಣದ ವಂಶ್ ಯಾದವ್ ಮತ್ತು ಲಕ್ಷ್ಯ ಬಾತ್ರಾ ಅವರನ್ನು 2–6, 6–4, 10–6ರಲ್ಲಿ ಮಣಿಸಿದರು. ನಿನಾದ್‌, ಬೆಂಗಳೂರಿನ ಸುರಾನ ಕಾಲೇಜು ವಿದ್ಯಾರ್ಥಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.