ಫೆಡರರ್‌ಗೆ 400ನೇ ಪಂದ್ಯದಲ್ಲಿ ಜಯ ಪ್ಯಾರಿಸ್‌ : ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ಶುಕ್ರವಾರ ದಾಖಲೆಯ 400ನೇ ಗ್ರ್ಯಾನ್‌ಸ್ಲ್ಯಾಂ ಪಂದ್ಯ ಆಡಿದರು. ನಾರ್ವೆಯ ಕಾಸ್ಪರ್ ರೂಡ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದ ಅವರು ಫ್ರೆಂಚ್ ಓಪನ್ ಟೂರ್ನಿಯ ನಾಲ್ಕನೇ ಸುತ್ತು ಪ್ರವೇಶಿಸಿದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನೂ ತಮ್ಮದಾಗಿಸಿಕೊಂಡರು. 2015ರ ನಂತರ ಇದೇ ಮೊದಲ ಬಾರಿ ರೋಲ್ಯಂಡ್ ಗ್ಯಾರೋಸ್‌ನಲ್ಲಿ ಆಡುತ್ತಿರುವ ಫೆಡರರ್‌ ಮೂರನೇ ಸುತ್ತಿನ ಪಂದ್ಯದಲ್ಲಿ ರೂಡ್ ಅವರನ್ನು 6–3, 6–1, 7–6(10/8)ರಲ್ಲಿ ಮಣಿಸಿದರು. ಅವರು ಒಟ್ಟು 52 ವಿನ್ನರ್‌ಗಳನ್ನು ಮತ್ತು 11 ಏಸ್‌ಗಳನ್ನು ಸಿಡಿಸಿದರು. ಇಟಲಿಯ ನಿಕೋಲ ಪೆಟ್ರಂಗೇಲಿ 1972ರಲ್ಲಿ 38ರ ಹರಯದಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಆಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.