ಭುಜದ ನೋವು: ಕ್ವಿಟೋವಾ ಹೊರಕ್ಕೆ ಪ್ಯಾರಿಸ್‌: ಭುಜದ ನೋವಿಗೆ ಒಳಗಾಗಿರುವ ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಿಂದ ಹೊರಗುಳಿದಿದ್ದಾರೆ. ಟೂರ್ನಿಯ ಪ್ರಥಮ ಸುತ್ತಿನ ಪಂದ್ಯದಲ್ಲಿ ರೊಮೇನಿಯಾದ ಸೊರಾನಾ ಕ್ರಿಸ್ಟಿಯಾ ಎದುರು ಕ್ವಿಟೋವ ಆಡಬೇಕಿತ್ತು. ಪಂದ್ಯಕ್ಕೆ ಕೆಲವೇ ತಾಸುಗಳಿರುವಾಗ ಅವರು ಟ್ವಿಟರ್‌ನಲ್ಲಿ ನಿರ್ಧಾರ ಪ್ರಕಟಿಸಿದ್ದಾರೆ. ‘ಟೂರ್ನಿಯಿಂದ ಹೊರಗುಳಿಯುತ್ತಿರುವುದು ನಿರಾಸೆ ತಂದಿದೆ. ಕೆಲವು ವಾರಗಳಿಂದ ನನ್ನ ಎಡ ತೋಳಿನಲ್ಲಿ ನೋವು ಕಾಣಿಸಿಕೊಂಡಿತ್ತು. ಮೂಳೆಗೆ ಗಾಯವಾಗಿರುವುದು ಎಂಆರ್‌ಐ ಸ್ಕ್ಯಾನ್‌ನಿಂದ ದೃಢಪಟ್ಟಿದೆ’ ಎಂದು ಕ್ವಿಟೋವ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.