ಟೆನಿಸ್‌: ಮುಖ್ಯ ಸುತ್ತಿಗೆ ನಗಾಲ್‌ ಹ್ಯಾಂಬರ್ಗ್ (ಪಿಟಿಐ): ಸುಮಿತ್‌ ನಗಾಲ್‌, ಹ್ಯಾಂಬರ್ಗ್‌ ಯುರೋಪಿ ಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಮುಖ್ಯ ಸುತ್ತು ಪ್ರವೇಶಿಸಿದ್ದಾರೆ. ಇದರೊಂದಿಗೆ ಎಟಿಪಿ 500 ಟೂರ್ನಿಯಲ್ಲಿ ಪ್ರಧಾನ ಹಂತಕ್ಕೆ ಲಗ್ಗೆ ಇಟ್ಟ ಭಾರತದ ನಾಲ್ಕನೇ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ರಾಮಕುಮಾರ್‌ ರಾಮನಾಥನ್‌, ಪ್ರಜ್ಞೇಶ್‌ ಗುಣೇಶ್ವರನ್‌ ಮತ್ತು ಯೂಕಿ ಭಾಂಬ್ರಿ ಈ ಸಾಧನೆ ಮಾಡಿದ್ದರು. ಭಾನುವಾರ ನಡೆದ ಅರ್ಹತಾ ಸುತ್ತಿನ ಎರಡನೇ ಹಣಾಹಣಿಯಲ್ಲಿ ನಗಾಲ್‌ 6–4, 7–5ರಲ್ಲಿ ಅಲೆಕ್ಸಾಂಡ್ರೊ ಫೋಕಿನಾ ಎದುರು ಗೆದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.