ಮಹಿಳಾ ಟೆನಿಸ್‌: ಅಗ್ರ ಕ್ರಮಾಂಕಕ್ಕೆ ಬಾರ್ಟಿ ಬರ್ಮಿಂಗಂ: ಆಸ್ಟ್ರೇಲಿಯಾದ ಆ್ಯಶ್ಲೆ ಬಾರ್ಟಿ, ಬರ್ಮಿಂಗಂ ಕ್ಲಾಸಿಕ್‌ ಗ್ರಾಸ್‌ಕೋರ್ಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ವಿಶ್ವ ಮಹಿಳಾ ಟೆನಿಸ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಏರುವುದನ್ನು ಖಚಿತಪಡಿಸಿಕೊಂಡಿದ್ದಾರೆ. 43 ವರ್ಷಗಳ ನಂತರ ಬಳಿಕ ಆಸ್ಟ್ರೇಲಿಯಾದ ಆಟಗಾರ್ತಿಯೊಬ್ಬರು ಈ ಹಿರಿಮೆಗೆ ಪಾತ್ರರಾಗುತ್ತಿದ್ದಾರೆ. 23 ವರ್ಷದ ಬರ್ಟಿ, ಬರ್ಮಿಂಗಂ ಟೂರ್ನಿಯ ಸಿಂಗಲ್ಸ್‌ ಫೈನಲ್‌ನಲ್ಲಿ 6–3, 7–5 ರಿಂದ ಜೂಲಿಯಾ ಜಾರ್ಜಸ್‌ ಅವರನ್ನು ಸೋಲಿಸಿದರು. ಸೋಮವಾರ ಹೊಸ ಕ್ರಮಾಂಕ ಪಟ್ಟಿ ಪ್ರಕಟವಾಗಲಿದ್ದು, ಜಪಾನ್‌ನ ನವೋಮಿ ಒಸಾಕಾ ಅಗ್ರಸ್ಥಾನಕ್ಕೆ ಚ್ಯುತಿ ಬರಲಿದೆ. 2014 ರಲ್ಲಿ ಟೆನಿಸ್‌ ಆಟಕ್ಕೆ ವಿದಾಯ ಹೇಳಿ ಬಿಗ್‌ ಬ್ಯಾಷ್‌ ಕ್ರಿಕೆಟ್‌ ಲೀಗ್‌ನಲ್ಲಿ ಬ್ರಿಸ್ಬೇನ್‌ ಹೀಟ್‌ ತಂಡಕ್ಕೆ ಆಡಿದ್ದರು. ಮತ್ತೆ ಟೆನಿಸ್‌ಗೆ ಮರಳಿದ್ದು 2016ರಲ್ಲಿ. ಇವೋನಿ ಗೂಲಗಾಂಗ್‌, 1976ರಲ್ಲಿ ಟೆನಿಸ್‌ನಲ್ಲಿ ಅಗ್ರ ಕ್ರಮಾಂಕಕ್ಕೆ ಏರಿದ ಆಸ್ಟ್ರೇಲಿಯಾದ ಕೊನೆಯ ಆಟಗಾರ್ತಿಯಾಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.