ಡೇವಿಸ್‌ ಕಪ್‌: ಟೆಲಿಕಾನ್ಫರೆನ್ಸ್‌ ಮುಂದಕ್ಕೆ ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ಡೇವಿಸ್‌ ಕಪ್‌ ಪಂದ್ಯಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ಟೆನಿಸ್‌ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ನ ಭದ್ರತಾ ಸಲಹೆಗಾರರ ನಡುವೆ ಸೋಮವಾರ ನಡೆಯಬೇಕಾಗಿದ್ದ ಟೆಲಿಕಾನ್ಫರೆನ್ಸ್‌ ಅನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ. ಇದರಲ್ಲಿ ಭಾಗವಹಿಸಬೇಕಾಗಿದ್ದ ಭಾರತ ಡೇವಿಸ್‌ ಕಪ್‌ ತಂಡದ ನಾಯಕ ಮಹೇಶ್‌ ಭೂಪತಿ ಈ ವಿಷಯ ತಿಳಿಸಿದರು. ಅವರು ಹೆಚ್ಚಿನ ವಿವರ ನೀಡಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.