ಟೆನಿಸ್‌: ನಿನಾದ್‌ ರವಿ ಸೆಮಿಫೈನಲ್‌ಗೆ ಬೆಂಗಳೂರು: ಕರ್ನಾಟಕದ ನಿನಾದ್‌ ರವಿ ಅವರು ಜಲಂಧರ್‌ನಲ್ಲಿ ನಡೆಯುತ್ತಿರುವ ಎಐಟಿಎ 18 ವರ್ಷದೊಳಗಿನವರ ಟೆನಿಸ್‌ ಚಾಂಪಿಯನ್‌ಷಿಪ್‌ ಸೆಮಿಫೈನಲ್‌ ತಲುಪಿದ್ದಾರೆ. ಬುಧವಾರ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅವರು ಪಂಜಾಬ್‌ನ ಸಾರ್ಥಕ್‌ ಗುಲಾಟಿ ಅವರನ್ನು 6–4, 6–ರಿಂದ ಮಣಿಸಿದರು. ಡಬಲ್ಸ್ ವಿಭಾಗದಲ್ಲಿ ನಿನಾದ್‌ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಪಶ್ಚಿಮ ಬಂಗಾಳದ ರಿಷಿ ರಾಜ್‌ ಜೊತೆ ಆಡಿದ ಅವರು, ತೆಲಂಗಾಣದ ವರುಣ್‌ ಜಿ.– ಮಹಾರಾಷ್ಟ್ರದ ಲೆಸ್ತರ್‌ ವಾಸ್‌ರನ್ನು 6–2, 6–4ರಿಂದ ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.