ಟೆನಿಸ್‌: ನಿಕಿ ಪೂಣಚ್ಚಗೆ ಪ್ರಶಸ್ತಿ ನವದೆಹಲಿ: ಅಮೋಘ ಆಟ ಆಡಿದ ನಿಕಿ ಪೂಣಚ್ಚ ಅವರು ಫೆನೆಸ್ಟಾ ಓಪನ್‌ ರಾಷ್ಟ್ರೀಯ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ನಿಕಿ 6–2, 7–6ರಲ್ಲಿ ಆರ್ಯನ್‌ ಗೋವೆಸ್‌ ಅವರನ್ನು ಪರಾಭವಗೊಳಿಸಿದರು. ಬೆಂಗಳೂರಿನಲ್ಲಿರುವ ರೋಹನ್‌ ಬೋಪಣ್ಣ ಟೆನಿಸ್‌ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ನಿಕಿ, ಮೊದಲ ಸೆಟ್‌ನಲ್ಲಿ ಸುಲಭವಾಗಿ ಎದುರಾಳಿಯ ಸವಾಲು ಮೀರಿದರು. ಎರಡನೇ ಸೆಟ್‌ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು. ಅಗ್ರಶ್ರೇಯಾಂಕದ ಆಟಗಾರ ನಿಕಿ, ‘ಟೈ ಬ್ರೇಕರ್‌’ನಲ್ಲಿ ಪರಿಣಾಮಕಾರಿಯಾಗಿ ಆಡಿ ಗೆಲುವಿನ ತೋರಣ ಕಟ್ಟಿದರು. ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸೌಜನ್ಯ ಬವಿಶೆಟ್ಟಿ ಅವರ ಪಾಲಾಯಿತು. ಫೈನಲ್‌ನಲ್ಲಿ ಸೌಜನ್ಯ 6–4, 6–2ರಲ್ಲಿ ಪ್ರೇರಣಾ ಭಾಂಬ್ರಿಗೆ ಆಘಾತ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.