ಟೆನಿಸ್‌: ದಿವಿಜ್‌ಗೆ ಡಬಲ್ಸ್‌ ಗರಿ ಸೇಂಟ್‌ ಪೀಟರ್ಸ್‌ಬರ್ಗ್‌, ರಷ್ಯಾ: ಭಾರತದ ದಿವಿಜ್‌ ಶರಣ್‌ ಮತ್ತು ಸ್ಲೊವೇಕಿಯಾದ ಇಗರ್‌ ಜೆಲೆನಯ್‌ ಅವರು ಸೇಂಟ್‌ ಪೀಟರ್ಸ್‌ಬರ್ಗ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಭಾನುವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ದಿವಿಜ್‌ ಮತ್ತು ಇಗರ್‌ 6–3, 3–6, 10–8ರಲ್ಲಿ ಇಟಲಿಯ ಮಟ್ಟೊ ಬೆರೆಟಿನಿ ಮತ್ತು ಸೈಮನ್‌ ಬೊಲೆಲಿ ಎದುರು ಗೆದ್ದರು. ಈ ಹೋರಾಟ ಒಂದು ಗಂಟೆ 17 ನಿಮಿಷ ನಡೆಯಿತು. ದಿವಿಜ್‌ ಅವರು ವೃತ್ತಿಬದುಕಿನಲ್ಲಿ ಗೆದ್ದ ಐದನೇ ಎಟಿಪಿ ಕಿರೀಟ ಇದಾಗಿದೆ. ಈ ಋತುವಿನಲ್ಲಿ ಜಯಿಸಿದ ಎರಡನೇ ಟ್ರೋಫಿ. ಈ ವರ್ಷದ ಆರಂಭದಲ್ಲಿ ಪುಣೆಯಲ್ಲಿ ನಡೆದಿದ್ದ ಮಹಾರಾಷ್ಟ್ರ ಓಪನ್‌ನಲ್ಲೂ ಚಾಂಪಿಯನ್‌ ಆಗಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.