ಎಐಟಿಎ ಟೆನಿಸ್‌ ಚಾಂಪಿಯನ್‌ಷಿಪ್‌: ನಿನಾದ್‌ ಜೋಡಿ ರನ್ನರ್‌ ಅಪ್‌ ಬೆಂಗಳೂರು: ಕರ್ನಾಟಕದ ನಿನಾದ್‌ ರವಿ ಹಾಗೂ ಮಹಾರಾಷ್ಟ್ರದ ಇಂದ್ರ ಜೀತ್‌ ಬೋರಡೆ ಜೋಡಿಯು ಹರಿ ಯಾಣದ ಕಾರ್ನಲ್‌ನಲ್ಲಿ ನಡೆದ ಎಐಟಿಎ ಟೆನಿಸ್‌ ಚಾಂಪಿಯನ್‌ಷಿಪ್‌ನ ಬಾಲಕರ (18 ವರ್ಷದೊಳಗಿನವರು)ಡಬಲ್ಸ್ ವಿಭಾಗದಲ್ಲಿ ರನ್ನರ್‌ ಅಪ್‌ ಆಯಿತು. ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ ಹರಿಯಾಣದ ಕೇಶ ರಥ್‌ ಹಾಗೂ ಬಿ.ಸಿದ್ದಾರ್ಥ್‌ ಜೋಡಿಗೆ 6–3, 2–6, 9–11ರಿಂದ ನಿನಾದ್‌ ಜೋಡಿ ಮಣಿಯಿತು. ಮೊದಲ ಸೆಟ್‌ನಲ್ಲಿ ಗಳಿಸಿದ ಮುನ್ನಡೆಯನ್ನು ಕಾಯ್ದುಕೊಳ್ಳಲು ವಿಫಲವಾಯಿತು. ಇದಕ್ಕೂ ಮುನ್ನ ನಡೆದ ಸಿಂಗಲ್ಸ್ ಸೆಮಿಫೈನಲ್‌ ಹಣಾಹಣಿಯಲ್ಲಿ ನಿನಾದ್‌ ಅವರು ಹರಿಯಾಣದ ಡಿ.ವಿವೇಕ್‌ ಕುಮಾರ್‌ ಎದುರು 6–4, 2–6, 3–6ರಿಂದ ನಿರಾಸೆ ಕಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.