ಟೆನಿಸ್‌: ಶಶಿಕುಮಾರ್ ಗಮನಾರ್ಹ ಸಾಧನೆ ಬಾಟೋ, ಚೀನಾ: ಭಾರತದ ಶಶಿಕುಮಾರ್ ಮುಕುಂದ್ ಇಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್ ಟೂರ್‌ನ ಫೈನಲ್ ಪ್ರವೇಶಿಸಿದ್ದಾರೆ. ಇದು ಅವರ ವೃತ್ತಿ ಜೀವನದ ಅತಿ ದೊಡ್ಡ ಸಾಧನೆಯಾಗಿದೆ. ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ 12ನೇ ಶ್ರೇಯಾಂಕದ ಶಶಿಕುಮಾರ್ ಚೀನಾದ ತುಂಗ್ ಲಿನ್ ವೂ ಅವರನ್ನು 7–5, 6–3ರಲ್ಲಿ ಮಣಿಸಿದರು. ಡಬಲ್ಸ್‌ನಲ್ಲೂ ಅವರು ಫೈನಲ್ ಪ್ರವೇಶಿಸಿದರು. ರಷ್ಯಾದ ತೆಯ್ಮುರಾಸ್ ಗಬಸ್ವಿಲಿ ಅವರ ಜೊತೆಗೂಡಿ ಅವರು ಗೊನ್ಸಾಲೊ ಒಲಿವೆರಾ ಮತ್ತು ಲೂಕ್ ಸಾವಿಲಿ ಜೋಡಿಯನ್ನು 6–3, 3–6, 13–11ರಲ್ಲಿ ಸೋಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.