ಬಾರ್ಟಿಗೆ ಆಘಾತ ನೀಡಿದ ಬರ್ಟನ್ಸ್ ಶೆನ್‌ಜೆನ್‌, ಚೀನಾ : ಕಿಕಿ ಬರ್ಟನ್ಸ್ ಅವರು ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಆ್ಯಶ್ಲೆ ಬಾರ್ಟಿ ಅವರಿಗೆ ಆಘಾತ ನೀಡಿದರು. ಮಂಗಳವಾರ ಇಲ್ಲಿ ನಡೆದ ಡಬ್ಲ್ಯುಟಿಎ ಟೆನಿಸ್‌ ಫೈನಲ್ಸ್ ಪಂದ್ಯದಲ್ಲಿ 3–6, 6–3, 6–4ರಿಂದ ಅವರು ಗೆಲುವಿನ ನಗು ಬೀರಿದರು. ವಿಶ್ವದ 10ನೇ ಕ್ರಮಾಂಕದ ನೆದರ್ಲೆಂಡ್ಸ್ ಆಟಗಾರ್ತಿ ಬರ್ಟನ್ಸ್, ಮೊದಲ ಸೆಟ್‌ನಲ್ಲಿ ಸೋತರೂ ಎದೆಗುಂದಲಿಲ್ಲ. ಆಕ್ರಮಣಕಾರಿ ಆಟದ ಮೂಲಕ ಎದುರಾಳಿಯನ್ನು ಕಂಗೆಡಿಸಿದರು. 2 ತಾಸು 9 ನಿಮಿಷಗಳವರೆಗೆ ಪಂದ್ಯ ಸಾಗಿತು. ಹೋದ ವಾರ ಜುಹೈ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದ ಬರ್ಟನ್ಸ್ ತಮ್ಮ ಅದ್ಭುತ ಫಾರ್ಮ್‌ ಮುಂದುವರಿಸಿದರು. ಚೀನಾ ಓಪನ್‌ನಲ್ಲೂ ಅವರು ಸೆಮಿಫೈನಲ್‌ಗೆ ಕಾಲಿಟ್ಟಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.