ನವೊಮಿ ಒಸಾಕಾಗೆ ಗಾಯ ಶೆಂಜಾನ್, ಚೀನಾ : ಜಪಾನಿನ ಟೆನಿಸ್ ತಾರೆ ನವೊಮಿ ಒಸಾಕಾ ಅವರು ಭುಜದ ನೋವಿನ ಕಾರಣದಿಂದ ಇಲ್ಲಿಯ ನಡೆಯಲಿರುವ ಡಬ್ಲ್ಯುಟಿಎ ಫೈನಲ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೋದ ವರ್ಷವೂ ಅವರು ಸ್ನಾಯುಸೆಳೆತದ ಕಾರಣದಿಂದ ಹಿಂದೆ ಸರಿದಿದ್ದರು. ಈ ಬಾರಿಯೂ ಅವರಿಗೆ ಗಾಯದ ಸಮಸ್ಯೆ ಮತ್ತೆ ಕಾಡಿತು. ‘ಫೈನಲ್‌ನಿಂದ ಹಿಂದೆ ಸರಿದಿದ್ದು ಅತೀವ ಬೇಸರವಾಗಿದೆ. ಇದೊಂದು ಶ್ರೇಷ್ಠವಾದ ಟೂರ್ನಿಯಾಗಿತ್ತು. ಇದರಲ್ಲಿ ಗೆಲ್ಲುವುದು ದೊಡ್ಡ ಗೌರವವಾಗಿತ್ತು’ ಎಂದು ಒಸಾಕಾ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.