ನಡಾಲ್‌ ಬಲ: ಫೈನಲ್‌ಗೆ ಸ್ಪೇನ್‌ ಮ್ಯಾಡ್ರಿಡ್‌, ಸ್ಪೇನ್‌ : ರಫೆಲ್‌ ನಡಾಲ್‌ ಅವರ ಅಮೋಘ ಆಟದ ಬಲದಿಂದ ಸ್ಪೇನ್‌ ತಂಡ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಫೈನಲ್‌ಗೆ ಕಾಲಿಟ್ಟಿತು. ಅವರು ಫೆಲಿಸಿಯಾನೊ ಲೋಪೆಜ್‌ ಜೊತೆಗೂಡಿ ಬ್ರಿಟನ್‌ ಜೋಡಿಯ ಎದುರು 2–1ರಿಂದ ಜಯಿಸಿದರು. 2012ರ ಬಳಿಕ ಸ್ಪೇನ್‌ ತಂಡ ಮೊದಲ ಬಾರಿ ಡೇವಿಸ್‌ ಕಪ್‌ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಶನಿವಾರ ಸಿಂಗಲ್ಸ್ ವಿಭಾಗದಲ್ಲಿ ಲೋಪೆಜ್‌ ಅವರು ಬ್ರಿಟನ್‌ನ ಕೈಲ್‌ ಎಡ್ಮಂಡ್‌ ಅವರಿಗೆ3–6 6–7ರಿಂದ ಮಣಿದಿದ್ದರು. ಆದರೆ ಇನ್ನೊಂದು ಪಂದ್ಯದಲ್ಲಿ ಸಂಪೂರ್ಣ ಪಾರಮ್ಯ ಮೆರೆದಿದ್ದ ನಡಾಲ್‌ 6–4, 6–0ರಿಂದ ಡ್ಯಾನ್‌ ಇವಾನ್ಸ್ ಎದುರು ಗೆದ್ದರು. ನಿರ್ಣಾಯಕವಾಗಿದ್ದ ಡಬಲ್ಸ್ ಪಂದ್ಯದಲ್ಲಿ ನಡಾಲ್‌–ಲೋಪೆಜ್‌ ಜೋಡಿಯು ಜಾಮಿ ಮರ್ರೆ–ನೀಲ್‌ ಸ್ಕಪ್ಸ್‌ಕಿ ಎದುರು 7–6, 7–6ರಿಂದ ಗೆದ್ದು ಫೈನಲ್‌ಗೆ ಲಗ್ಗೆಯಿಟ್ಟಿತು. ಫೈನಲ್‌ ಪಂದ್ಯದಲ್ಲಿಸ್ಪೇನ್‌, ಕೆನಡಾ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.