ರ‍್ಯಾಂಕಿಂಗ್‌: ಅಗ್ರ 50ರೊಳಗೆ 15ರ ಗಫ್‌ ನ್ಯೂಯಾರ್ಕ್‌: ಅಮೆರಿಕದ 15ರ ಬಾಲೆ ಕೊಕೊ ಗಫ್‌ ಡಬ್ಲ್ಯುಟಿಎ ಟೆನಿಸ್‌ ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿಗೆ ಅಗ್ರ 50ರೊಳಗಿನ ಸ್ಥಾನ ಪ್ರವೇಶಿಸಿದ್ದಾರೆ. ಇದರೊಂದಿಗೆ 15 ವರ್ಷಗಳ ಬಳಿಕ ಈ ರೀತಿಯ ಸಾಧನೆ ಮಾಡಿದ ಟೆನಿಸ್‌ ಪಟು ಎನಿಸಿದರು. ಸೋಮವಾರ ಪ್ರಕಟವಾದ ರ‍್ಯಾಂಕಿಂಗ್‌ನಲ್ಲಿ ಗಫ್‌ 49ನೇ ಸ್ಥಾನದಲ್ಲಿದ್ದರು. 2005ರ ಆಗಸ್ಟ್‌ನಲ್ಲಿ ಬಲ್ಗೇರಿಯಾದ ಸೆಸಿಲ್‌ ಕರಟಾಂಚೆವಾ ತಮ್ಮ 15ನೇ ವಯಸ್ಸಿನಲ್ಲಿ 50ರ ರ‍್ಯಾಂಕಿಂಗ್‌ ಗಡಿ ಪ್ರವೇಶಿಸಿದ್ದರು. ಈ ವರ್ಷದ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯಲ್ಲಿ ಮೊದಲ ಬಾರಿ ಕಣಕ್ಕಿಳಿದಿದ್ದ ಫ್ಲೊರಿಡಾ ಮೂಲದ ಆಟಗಾರ್ತಿ ಗಫ್‌, ನಾಲ್ಕನೇ ಸುತ್ತಿಗೆ ತಲುಪಿದ್ದರು. ಹೋದ ವರ್ಷದ ಜುಲೈನಲ್ಲಿ ಅಮೆರಿಕ ಓಪನ್‌ ಟೂರ್ನಿಯಲ್ಲಿ ವೀನಸ್‌ ವಿಲಿಯಮ್ಸ್‌ ಅವರನ್ನು ಮಣಿಸಿದಾಗಿನಿಂದ ಅವರು ಸುದ್ದಿಯಲ್ಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.