ಟೆನಿಸ್‌: ಸೆಮಿಗೆ ನಡಾಲ್‌ ಲಾಸ್‌ ಏಂಜಲಿಸ್‌ : ಸ್ಪೇನ್‌ನ ಅನುಭವಿ ಆಟಗಾರ ರಫೆಲ್‌ ನಡಾಲ್‌, ಎಟಿಪಿ ಮೆಕ್ಸಿಕೊ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ನಡಾಲ್‌ 6–2, 6–1 ನೇರ ಸೆಟ್‌ಗಳಿಂದ ದಕ್ಷಿಣ ಕೊರಿಯಾದ ಕ್ವೊನ್‌ ಸೂನ್‌ ವೂ ಅವರನ್ನು ಪರಾಭವಗೊಳಿಸಿದರು. ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದ ನಡಾಲ್‌, ಈ ಪಂದ್ಯದಲ್ಲಿ ಒಟ್ಟು 25 ವಿನ್ನರ್‌ಗಳನ್ನು ಸಿಡಿಸಿದರು. ಎಂಟು ಬ್ರೇಕ್‌ ಪಾಯಿಂಟ್ಸ್‌ಗಳನ್ನೂ ಕಾಪಾಡಿಕೊಂಡರು. ನಾಲ್ಕರ ಘಟ್ಟದಲ್ಲಿ ನಡಾಲ್‌ಗೆ ಗ್ರಿಗರ್‌ ಡಿಮಿಟ್ರೊವ್‌ ಸವಾಲು ಎದುರಾಗಲಿದೆ. ಎಂಟರ ಘಟ್ಟದ ಮತ್ತೊಂದು ಹಣಾಹಣಿಯಲ್ಲಿ ಡಿಮಿಟ್ರೊವ್‌ 6–4, 6–4ರಲ್ಲಿ ಸ್ವಿಟ್ಜರ್ಲೆಂಡ್‌ನ ಮೂರನೇ ಶ್ರೇಯಾಂಕದ ಆಟಗಾರ ಸ್ಟಾನಿಸ್ಲಾಸ್‌ ವಾವ್ರಿಂಕಗೆ ಆಘಾತ ನೀಡಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಟೇಲರ್‌ ಫ್ರಿಟ್ಜ್‌ ಮತ್ತು ಜಾನ್‌ ಇಸ್ನರ್‌ ಮುಖಾಮುಖಿಯಾಗಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.