ಕೊರೊನಾ ವಿರುದ್ಧ ಸಮರ: ₹ 1.25 ಕೋಟಿ ಸಂಗ್ರಹಿಸಿದ ಸಾನಿಯಾ ಮಿರ್ಜಾ ಹೈದರಾಬಾದ್: ಕೊರೊನಾ ವೈರಸ್ ತಡೆಗೆ ದೇಶದಲ್ಲಿ ಹಾಕಿರುವ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಬಡವರಿಗೆ ಸಹಾಯ ಮಾಡಲು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಹೋದ ಒಂದು ವಾರದಿಂದ ಸ್ವಸೇವಾ ಸಂಘಟನೆಯೊಂದಿಗೆ ಸಕ್ರಿಯರಾಗಿದ್ದಾರೆ. ಈ ಹಂತದಲ್ಲಿ ಇಅವರು ವಿವಿಧ ಮೂಲಗಳಿಂದ ₹ 1.25 ಕೋಟಿ ಸಂಗ್ರಹಿಸಿದ್ದು, ಸುಮಾರು ಒಂದು ಲಕ್ಷ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. "ಕಳೆದ ವಾರ ನಮ್ಮ ತಂಡವು ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಹಾಯ ಮಾಡಿತ್ತು. ಹಲವು ಕುಟುಂಬಗಳಿಗೆ ಆಹಾರ ಪೂರೈಕೆ ಮಾಡಿದ್ದೆವು. ಇದೀಗ ಒಂದೇ ಒಂದು ವಾರದಲ್ಲಿ ₹ 1.25 ಕೋಟಿ ಸಂಗ್ರಹವಾಗಿದೆ. ಇದರಲ್ಲಿ ಒಂದು ಲಕ್ಷ ಜನರಿಗೆ ಸಹಾಯ ಮಾಡಬಹುದು. ನಾವೆಲ್ಲರೂ ಜೊತೆಯಲ್ಲಿದ್ದೇವೆ. ಅಗತ್ಯವುಳ್ಳವರಿಗೆ ಸಹಾಯ ಮಾಡಲು ಕಟಿಬದ್ಧರಾಗಿದ್ದೇವೆ’ ಎಂದು ಸಾನಿಯಾ ಟ್ವೀಟ್ ಮಾಡಿದ್ದಾರೆ. ಯೂಥ್‌ಫೀಡ್‌ಇಂಡಿಯಾ@ಸೇಫ್‌ಇಂಡಿಯಾ ಸಂಸ್ಥೆಯ ಕಾರ್ಯಕರ್ತರೊಂದಿಗೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.