ಮಿಯಾಮಿ ಓಪನ್‌: ಫೈನಲ್‌ಗೆ ಸಿನ್ನರ್ ಮಿಯಾಮಿ ಗಾರ್ಡನ್ಸ್ (ಎಎಫ್‌ಪಿ): ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸ್ಪೇನ್‌ನ ಕಾರ್ಲೊಸ್ ಅಲ್ಕರಾಜ್ ಸವಾಲು ಮೀರಿದ ಇಟಲಿಯ ಜಾನಿಕ್ ಸಿನ್ನರ್ ಅವರು ಮಿಯಾಮಿ ಓಪನ್ ಟೆನಿಸ್‌ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟರು. ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಜಿದ್ದಾಜಿದ್ದಿ ಸೆಮಿಫೈನಲ್ ಪಂದ್ಯದಲ್ಲಿ ಸಿನ್ನರ್ 6-7 (4/7), 6-4, 6-2ರಿಂದ ಕಾರ್ಲೊಸ್ ಅವರಿಗೆ ಸೋಲುಣಿಸಿದರು.ಕಾರ್ಲೊಸ್ ಅವರು ಈ ಸೋಲಿನೊಂದಿಗೆ ಅಗ್ರ ರ‍್ಯಾಂಕ್‌ ಕಳೆದುಕೊಳ್ಳಲಿದ್ದಾರೆ. ಭಾನುವಾರ ನಡೆಯುವ ಫೈನಲ್ ಪಂದ್ಯದಲ್ಲಿ ಸಿನ್ನರ್ ಅವರು ರಷ್ಯಾದ ಡೇನಿಯಲ್ ಮೆಡ್ವೆಡೆವ್ ಅವರನ್ನು ಎದುರಿಸಲಿದ್ದಾರೆ.ನಾಲ್ಕರ ಘಟ್ಟದ ಮತ್ತೊಂದು ಪಂದ್ಯದಲ್ಲಿ ಮೆಡ್ವೆಡೆವ್ ಅವರು 7-6 (7/5), 3-6, 6-3ರಿಂದ ತಮ್ಮದೇ ದೇಶದ ಕರೆನ್ ಕಚನೊವ್ ಸವಾಲು ಮೀರಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.