ಬೋಪಣ್ಣ– ಎಬ್ಡೆನ್‌ ‘ರನ್ನರ್ಸ್‌ ಅಪ್‌’ ಮ್ಯಾಡ್ರಿಡ್‌: ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯು ಎಬ್ಡೆನ್ ಜೋಡಿ, ಮ್ಯಾಡ್ರಿಡ್‌ ಓಪನ್ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಸೋತು ರನ್ನರ್ಸ್‌ ಅಪ್‌ ಆಯಿತು. ಶನಿವಾರ ನಡೆದ ಫೈನಲ್‌ನಲ್ಲಿ ಬೋಪಣ್ಣ– ಎಬ್ಡೆನ್‌ 3-6, 6-3, 3-10 ರಲ್ಲಿ ರಷ್ಯಾದ ಕರೆನ್ ಕಚನೊವ್‌– ಆ್ಯಂಡ್ರೆ ರುಬ್ಲೆವ್ ಎದುರು ಪರಾಭವಗೊಂಡರು. 43 ವರ್ಷದ ಬೋಪಣ್ಣ ಅವರು ಮಾರ್ಚ್‌ನಲ್ಲಿ ಬಿಎನ್‌ಪಿ ಪರಿಬಾಸ್‌ ಓಪನ್‌ ಗೆದ್ದು, ಎಟಿಪಿ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.