ವಿಂಬಲ್ಡನ್‌ ಟೆನಿಸ್‌: ಕ್ವಾರ್ಟರ್‌ ಫೈನಲ್‌‌ ಪ್ರವೇಶಿಸಿದ ಬೋಪಣ್ಣ–ಎಬ್ಡೆನ್‌ ಜೋಡಿ ಲಂಡನ್: ಭಾರತೀಯ ಟೆನಿಸ್ ರಂಗದ ಡಬಲ್ಸ್ ತಾರೆ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌‌ಗೆ ಪ್ರವೇಶಿಸಿದೆ. ಪ್ರಿ ಕ್ವಾರ್ಟರ್‌ ಫೈನಲ್‌‌ ಪಂದ್ಯದಲ್ಲಿ ಈ ಜೋಡಿ ಅಮೆರಿಕದ ಸ್ಟಾಲ್ಡರ್‌ ಮತ್ತು ಡಚ್‌ಮ್ಯಾನ್‌ ಪೆಲ್‌ ಅವರನ್ನು 7-5, 4-6, 7-6 (10-5)ರಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌‌ಗೆ ಪ್ರವೇಶಿಸಿದರು. ಈ ಮೊದಲು ಈ ಜೋಡಿ, 7–5, 6–3 ರಲ್ಲಿ ಯೊಹಾನಸ್‌ ಮಂಡೇ–ಜೇಕಬ್ ಫೆರ್ನೆಲಿ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌‌ಗೆ ಪ್ರವೇಶಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.