ಶಾಂಘೈ ಓಪನ್‌: ಬೋಪಣ್ಣ– ಎಬ್ಡೆನ್‌ ರನ್ನರ್ಸ್‌ ಅಪ್ ಶಾಂಘೈ : ಭಾರತದ ರೋಹನ್‌ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಅವರು ಶಾಂಘೈ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಎಡವಿ ರನ್ನರ್ಸ್‌ ಅಪ್‌ ಆದರು. ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯನ್ನು 5–7, 6–2, 10–7 ರಿಂದ ಗೆದ್ದುಕೊಂಡ ಸ್ಪೇನ್‌ನ ಮಾರ್ಸೆಲ್‌ ಗ್ರಾನೊಲೆರ್ಸ್‌ ಮತ್ತು ಅರ್ಜೆಂಟೀನಾದ ಹೊರಾಸಿಯೊ ಝೆಬೆಲೊಸ್‌ ಅವರು ಕಿರೀಟ ಮುಡಿಗೇರಿಸಿಕೊಂಡರು. ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿದ್ದ ಬೋಪಣ್ಣ– ಎಬ್ಡೆನ್‌ ಜೋಡಿ ಮೊದಲ ಸೆಟ್‌ ಗೆದ್ದು ಉತ್ತಮ ಆರಂಭ ಪಡೆದಿದ್ದರು. ಆದರೆ ಏಳನೇ ಶ್ರೇಯಾಂಕದ ಗ್ರಾನೊಲೆರ್ಸ್‌ ಮತ್ತು ಝೆಬೆಲೊಸ್‌ ಅವರು ಪುಟಿದೆದ್ದು ನಿಂತು ಒಂದು ಗಂಟೆ 23 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.