ಫ್ಯಾಂಟಮ್‌ ಎಫ್‌ಸಿಗೆ ಭರ್ಜರಿ ಜಯ ಬೆಂಗಳೂರು: ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಸಿ ಡಿವಿಜನ್ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಬುಧವಾರ ಫ್ಯಾಂಟಮ್‌ ಎಫ್‌ಸಿ ತಂಡವು ಮಿನರ್ವ ಎಫ್‌ಸಿ ತಂಡವನ್ನು 6–0 ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರ ಕೊನಾಲಿಸ್‌ ಮೊರಿಂಗ್‌ ಅವರು ಅವಳಿ ಗೋಲು (20, 41ನೇ ನಿಮಿಷ) ಬಾರಿಸಿ ಮಿಂಚಿದರು. ನಿಶಾಂತ್ ಭಟ್‌ (7ನೇ ನಿಮಿಷ), ಲುಮಿನ್ಲೆನ್‌ ತೌಥಂಗ್‌ (20ನೇ ನಿಮಿಷ), ಖೆಲಿಂಗ್‌ ಆ್ಯಂಗ್‌ಸ್ಸುಯಿರಾಂಗ್‌ (45ನೇ ನಿಮಿಷ) ಹಾಗೂ ದಿನೇಶ್‌ ಶರ್ಮಾ (60ನೇ ನಿಮಿಷ) ತಲಾ ಒಂದು ಗೋಲು ಹೊಡೆದರು. ಮತ್ತೊಂದು ಪಂದ್ಯದಲ್ಲಿ ಸುನೇಸಾ ಎಫ್‌ಸಿ ತಂಡವು ವಿಜಯನಗರ ಎಫ್‌ಸಿ ತಂಡವನ್ನು 1–0 ಗೋಲಿನಿಂದ ಮಣಿಸಿತು. ಸುನೇಸಾ ಪರ ಕೊಂಗ್ರೆಯಿವೊ 16ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನೊಂದು ಪಂದ್ಯದಲ್ಲಿ ಯುನಿವರ್ಸಲ್‌ ಎಫ್‌ಸಿ ತಂಡವು ಇಸ್ರೊ ಎಫ್‌ಸಿ ತಂಡವನ್ನು 3–0ಯಿಂದ ಮಣಿಸಿತು. ವಿಜೇತ ತಂಡದ ಪರ ಬ್ರಿಜೇಶ್‌ (7ನೇ ನಿಮಿಷ), ಗುರುಪ್ರಸಾದ್‌ (16ನೇ ನಿಮಿಷ) ಹಾಗೂ ಸುನಿಲ್‌ಕುಮಾರ್‌ (27ನೇ ನಿಮಿಷ) ತಲಾ ಒಂದು ಗೋಲು ಹೊಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.