ಟೆನಿಸ್: ಇತಿಹಾಸದಲ್ಲೇ ಅತಿ ದೀರ್ಘ ಟೈಬ್ರೇಕರ್‌ ಮೆಲ್ಬರ್ನ್: ಮಹಿಳಾ ಗ್ರ್ಯಾಂಡ್‌ಸ್ಲಾಮ್‌ ಇತಿಹಾಸದಲ್ಲೇ ಅತ್ಯಂತ ದೀರ್ಘ ಟೈಬ್ರೇಕರ್‌ವರೆಗೆ ಬೆಳೆದ ಪಂದ್ಯದಲ್ಲಿ ಎಲೆನಾ ರಿಬಾಕಿನಾ ಅವರನ್ನು ಪರಾಭವಗೊಳಿಸಿದ ಅನ್ನಾ ಬ್ಲಿಂಕೊವಾ, ಆಸ್ಟ್ರೇಲಿಯನ್ ಓಪನ್ ಟೂರ್ನಿಯ ನಾಲ್ಕನೇ ಸುತ್ತಿಗೆ ಮುನ್ನಡೆದರು. 9 ಬಾರಿ ಮ್ಯಾಚ್‌ ಪಾಯಿಂಟ್‌ ಅವಕಾಶ ಕಳೆದುಕೊಂಡ, ಆರು ಬಾರಿ ಉಳಿಸಿಕೊಂಡ ಬ್ಲಿಂಕೊವಾ ಗುರುವಾರ ದೊಡ್ಡ ಅನಿರೀಕ್ಷಿತ ಫಲಿತಾಂಶಕ್ಕೆ ಕಾರಣರಾದರು. ಕಳೆದ ವರ್ಷ ಈ ಟೂರ್ನಿಯ ಫೈನಲ್ ತಲುಪಿದ್ದ ರಿಬಾಕಿನಾ, ಅಂಕಣದ ಇನ್ನೊಂದು ಬದಿ ಅಷ್ಟೇ ನರ್ವಸ್‌ ಆಗಿದ್ದರು. ಅಂತಿಮವಾಗಿ ಬ್ಲಿಂಕೊನಾ 6–4, 4–6, 7–6 (20) ರಿಂದ ಜಯಗಳಿಸಿದರು. ಟೈಬ್ರೇಕರ್ 42 ಪಾಯಿಂಟ್‌ಗಳನ್ನು ಕಂಡಿತು. 2022ರ ವಿಂಬಲ್ಡನ್ ಚಾಂಪಿಯನ್ ಸಹ ಆಗಿರುವ ರಿಬಾಕಿನಾ, ಕಳೆದ ವರ್ಷ ಇಲ್ಲಿ ಅರಿನಾ ಸಬಲೆಂಕಾ ಎದುರು ಸೋತಿದ್ದರು. ಅವರು ಆರು ಸರ್ವಿಸ್‌ ಬ್ರೇಕ್‌ಗಳನ್ನು ಕಂಡ ಮೂರನೇ ಸೆಟ್‌ನಲ್ಲಿ ಎರಡು ಮ್ಯಾಚ್‌ ಪಾಯಿಂಟ್‌ಗಳನ್ನು ಉಳಿಸಿದ್ದರು. ‘ನನ್ನಿಂದಾದಷ್ಟು ಶಾಂತಚಿತ್ತಳಾಗಿ ಆಡಲು ಪ್ರಯತ್ನಿಸಿದೆ’ ಎಂದು ಬ್ಲಿಂಕೋವಾ ಹೇಳಿದರು. ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್‌ ರಾಡ್‌ ಲೇವರ್ ಅರೇನಾದಲ್ಲಿ ನಡೆದ ದಿನದ ಮೊದಲ ಪಂದ್ಯದಲ್ಲಿ 6–4, 3–6, 6–4 ರಿಂದ 2022ರ ರನ್ನರ್ ಅಪ್‌ ಡೇನಿಯಲಿ ಕಾಲಿನ್ಸ್ ಅವರನ್ನು 6–4, 3–6, 6–4 ರಿಂದ ಸೋಲಿಸಿದರು. ಮೂರನೇ ಸೆಟ್‌ನಲ್ಲಿ ಶ್ವಾಂಟೆಕ್ 1–4 ಹಿನ್ನಡೆಯಿಂದ ಚೇತರಿಸಿ ಜಯಗಳಿಸಿದ್ದು ವಿಶೇಷವಾಗಿತ್ತು. ಐದನೇ ಶ್ರೇಯಾಂಕದ ಜೆಸಿಕಾ ಪೆಗುಲಾ ಮತ್ತು 2021ರ ಅಮೆರಿಕ ಓಪನ್ ಚಾಂಪಿಯನ್ ಎಮ್ಮಾ ರಾಡುಕಾನು ಅವರು ಹೊರಬಿದ್ದರು. ವಿಂಬಲ್ಡನ್ ಚಾಂಪಿಯನ್ ಕಾರ್ಲೊಸ್‌ ಅಲ್ಕರಾಝ್ 6–4, 6–7 (3), 6–3, 7–6 (3) ರಿಂದ ಲೊರೆಂಝೊ ಸೊನೆಗೊ ಅವರನ್ನು ಸೋಲಿಸಿದರು. ಮೊದಲ ಬಾರಿ ಅವರು ಈ ಟೂರ್ನಿಯಲ್ಲಿ ಸೆಟ್‌ ಕಳೆದು ನಗಾಲ್ ಸವಾಲು ಅಂತ್ಯ ನಗಾಲ್ ಸವಾಲು ಅಂತ್ಯ: ಭಾರತದ ಸುಮಿತ್‌ ನಗಾಲ್ ಅವರ ಸವಾಲನ್ನು ಬದಿಗೊತ್ತಿದ ಚೀನಾದ ಪ್ರತಿಭಾನ್ವಿತ ಜುನ್‌ಚೆಂಗ್‌ ಶಾಂಗ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತನ್ನು ತಲುಪಿದರು. ಆ ಮೂಲಕ ವರ್ಷದ ಮೊದಲ ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಯಲ್ಲಿ ಭಾರತದ ಆಟಗಾರನ ಸ್ಫೂರ್ತಿಯುತ ಓಟಕ್ಕೆ ಗುರುವಾರ ತೆರೆಬಿತ್ತು. ‌26 ವರ್ಷದ ನಗಾಲ್‌ ವಿರುದ್ಧ 18 ವರ್ಷದ ಆಟಗಾರ ಶಾಂಗ್‌ 2–6 6–3, 7–5, 6–4 ರಿಂದ ಗೆದ್ದರು. ಬೋಪಣ್ಣ–ಎಬ್ಡೆನ್ ಮುನ್ನಡೆ: ಭಾರತದ ರೋಹನ್ ಬೋಪಣ್ಣ ಮತ್ತು ಅವರ ಆಸ್ಟ್ರೇಲಿಯಾ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರು ಪುರುಷರ ಡಬಲ್ಸ್‌ ಮೂರನೇ ಸುತ್ತನ್ನು ತಲುಪಿದರು. ಅವರು ಮೊದಲ ಸೆಟ್‌ನ 0–5 ಹಿನ್ನಡೆಯಿಂದ ಚೇತರಿಸಿಕೊಂಡು 7–6 (7), 4–6, 7–6 (10) ರಿಂದ ಸ್ಥಳೀಯ ಆಟಗಾರರಾದ ಜೇಮ್ಸ್‌ ಡಕ್‌ವರ್ತ್‌– ಮಾರ್ಕ್ ಪೋಲ್ಮನ್ಸ್‌ ಜೋಡಿಯನ್ನು ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.