ಟೆನಿಸ್‌: ಸೆಮಿಫೈನಲ್‌ನಲ್ಲಿ ಅಲ್ಕರಾಜ್‌– ಸಿನ್ನರ್‌ ಸೆಣಸು ಇಂಡಿಯನ್‌ ವೆಲ್ಸ್, ಅಮೆರಿಕ: ಇಂಡಿಯನ್ ವೆಲ್ಸ್‌ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಕಾರ್ಲೊಸ್ ಅಲ್ಕರಾಜ್‌ ಅವರು ಯಾನಿಕ್‌ ಸಿನ್ನರ್‌ ವಿರುದ್ಧ ಪೈಪೋಟಿ ನಡೆಸಲಿದ್ದಾರೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಪೇನ್‌ನ ಆಟಗಾರ ಅಲ್ಕರಾಜ್‌ 6–3, 6–1 ರಿಂದ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಅವರನ್ನು ಮಣಿಸಿದರು. ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಇಟಲಿಯ ಸಿನ್ನರ್ 6–3, 6–3 ರಿಂದ ಜೆಕ್‌ ರಿಪಬ್ಲಿಕ್‌ನ ಜಿರಿ ಲೆಹೆಕಾ ಎದುರು ಗೆದ್ದರು. ಶನಿವಾರ ನಡೆಯಲಿರುವ ಇನ್ನೊಂದು ಸೆಮಿಫೈನಲ್‌ನಲ್ಲಿ ಅಮೆರಿಕದ ಟಾಮಿ ಪೌಲ್ ಮತ್ತು ರಷ್ಯಾದ ಡೇನಿಯೆಲ್‌ ಮೆಡ್ವೆಡೆವ್‌ ಎದುರಾಗುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.