ವಿಂಬಲ್ಡನ್‌ ಟೆನಿಸ್‌ ಟೂರ್ನಿ: ನಾಲ್ಕರ ಘಟ್ಟಕ್ಕೆ ಡೋನಾ, ಜಾಸ್ಮಿನ್‌ ಲಂಡನ್: ಕ್ರೊವೇಷ್ಯಾದ ಡೋನಾ ವೆಕಿಚ್‌ ಮತ್ತು ಇಟಲಿಯ ಜಾಸ್ಮಿನ್ ಪಾವೋಲಿನಿ ಅವರು ವಿಂಬಲ್ಡನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ತಲುಪಿದರು. ಮಂಗಳವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಡೋನಾ 5-7, 6-4, 6-1ರಿಂದ ನ್ಯೂಜಿಲೆಂಡ್‌ನ ಲುಲು ಸನ್‌ ಅವರನ್ನು ಸೋಲಿಸಿದರು. ಡೋನಾ ಅವರು, ಮಿರ್ಜಾನಾ ಲೂಸಿಕ್ (1999) ನಂತರ ವಿಂಬಲ್ಡನ್‌ನಲ್ಲಿ ಸೆಮಿಫೈನಲ್‌ ತಲುಪಿದ ಕ್ರೊವೇಷ್ಯಾದ ಎರಡನೇ ಆಟಗಾರ್ತಿಯಾಗಿದ್ದಾರೆ.ಅವರು ಸೆಮಿಫೈನಲ್‌ನಲ್ಲಿ ಏಳನೇ ಕ್ರಮಾಂಕದ ಜಾಸ್ಮಿನ್ ಅವರನ್ನು ಎದುರಿಸಲಿದ್ದಾರೆ. ಫ್ರೆಂಚ್‌ ಓಪನ್‌ ರನ್ನರ್‌ ಅಪ್‌ ಜಾಸ್ಮಿನ್‌ 6–2, 6–1ರಿಂದ 19ನೇ ಕ್ರಮಾಂಕದ ಎಮ್ಮಾ ನವಾರೊ ಅವರನ್ನು ಮಣಿಸಿದರು. ನವಾರೊ, ಹಿಂದಿನ ಪಂದ್ಯದಲ್ಲಿ ಕೊಕೊ ಗಾಫ್‌ ಅವರಿಗೆ ಆಘಾತ ನೀಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.