ಅಮೆರಿಕ ಓಪನ್ ಟೆನಿಸ್‌: ಹಿಂದೆಸರಿದ ವೊಂದ್ರುಸೋವಾ ನ್ಯೂಯಾರ್ಕ್: 2023ರ ವಿಂಬಲ್ಡನ್ ಮಹಿಳಾ ಚಾಂಪಿಯನ್ ಮರ್ಕೆತಾ ವೊಂದ್ರುಸೋವಾ ಮತ್ತು ಬ್ರಿಟನ್‌ನ ಆಟಗಾರ ಕ್ಯಾಮ್‌ ನೋರಿ ಅವರು ಆ.26ರಂದು ಆರಂಭವಾಗುವ ಅಮೆರಿಕ ಓಪನ್ ಟೆನಿಸ್‌ ಟೂರ್ನಿಯಿಂದ ಹಿಂದೆಸರಿದಿದ್ದಾರೆ. 25 ವರ್ಷ ವಯಸ್ಸಿನ ವೊಂದ್ರುಸೋವಾ (ಝೆಕ್‌ ರಿಪಬ್ಲಿಕ್‌) ಪ್ರಸ್ತುತ 18ನೇ ಕ್ರಮಾಂಕ ಹೊಂದಿದ್ದಾರೆ. ಅವರು ತೋಳಿನ ನೋವಿನಿಂದಾಗಿ ಆಡುತ್ತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.