ಫಿಫಾ: ಪೆರು ಚುರುಕಿನಾಟ; ಆಸ್ಟ್ರೇಲಿಯಾ ಪರದಾಟ ಮಾಸ್ಕೋ: ಫಿಷ್ತ್ ಕ್ರೀಡಾಂಗಣದಲ್ಲಿ ಮಂಗಳವಾರ ಆಸ್ಟ್ರೇಲಿಯಾ ತಂಡದ ಆಟ ನಡೆಯಲಿಲ್ಲ. ಸಿ ಗುಂಪಿನ ಪಂದ್ಯದಲ್ಲಿ ಪೆರು ತಂಡವು 2–0 ಗೋಲುಗಳಿಂದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತು. ಆದರೆ ಈ ಎರಡೂ ತಂಡಗಳು ಪ್ರೀಕ್ವಾರ್ಟರ್‌ಫೈನಲ್‌ ಪ್ರವೇಶಿಸುವ ಅವಕಾಶ ಪಡೆಯಲಿಲ್ಲ. ಏಕೆಂದರೆ ಈ ಗುಂಪಿನಲ್ಲಿ ಈಗಾಗಲೇ ಫ್ರಾನ್ಸ್‌ (7) ಮತ್ತು ಡೆನ್ಮಾರ್ಕ್ (5) ತಂಡಗಳು ಮೊದಲ ಎರಡು ಸ್ಥಾನಗಳಲ್ಲಿವೆ. ಅವರು 16ರ ಘಟ್ಟಕ್ಕೆ ಪ್ರವೇಶ ಗಿಟ್ಟಿಸಿವೆ. ಆದರೆ, ಪೆರು ಮೂರು ಪಂದ್ಯಗಳಲ್ಲಿ ಒಂದು ಗೆದ್ದು 2ರಲ್ಲಿ ಸೋತಿದೆ. ಆಸ್ಟ್ರೇಲಿಯಾ ಮೂರರಲ್ಲಿ ಒಂದು ಡ್ರಾ ಮತ್ತು ಎರಡರಲ್ಲಿ ಸೋತಿದೆ. ಆದ್ದರಿಂದ ಎರಡೂ ತಂಡಗಳು ಕ್ರಮವಾಗಿ ಮೂರು ಮತ್ತು ಒಂದು ಪಾಯಿಂಟ್ ಗಳಿಸಿವೆ. ಆಸ್ಟ್ರೇಲಿಯಾ ವಿರುದ್ಧ ಗೆದ್ದ ಪೆರು ತಂಡವು ಸಮಾಧಾನ ಪಟ್ಟಿತು. ತಂಡದ ಕಾರ್ಲೋಸ್ 18ನೇ ನಿಮಿಷದಲ್ಲಿ ಮತ್ತು ಪೌಲೊ ಗರಾರೊ 50ನೇ ನಿಮಿಷದಲ್ಲಿ ಗೋಲು ಹೊಡೆದರು. ಆಸ್ಟ್ರೇಲಿಯಾದ ಆಕ್ರಮಣಕಾರಿ ಆಟವನ್ನು ಚಾಣಾಕ್ಷ ತಂತ್ರಗಾರಿಕೆಯಿಂದ ಮೆಟ್ಟಿ ನಿಂತ ಪೆರು ಬೀಗಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.