ಭಾರಿ ಗಾಳಿ: ಮುಚ್ಚಿದ ಫ್ಯಾನ್‌ ಜೋನ್‌ ಮಾಸ್ಕೊ: ಭಾರಿ ಗಾಳಿ–ಮಳೆಗೆ ನಲುಗಿದ ನಗರದಲ್ಲಿ, ವಿಶ್ವಕಪ್‌ ವೀಕ್ಷಿಸಲು ಸ್ಥಾಪಿಸಿದ್ದ ಫ್ಯಾನ್‌ ಜೋನ್‌ ಶನಿವಾರ ಮುಚ್ಚಲಾಯಿತು. ಹೀಗಾಗಿ ಬೃಹತ್ ಪರದೆಯಲ್ಲಿ ಪಂದ್ಯ ವೀಕ್ಷಿಸಲು ಕಾಯುತ್ತಿದ್ದ 25 ಸಾವಿರಕ್ಕೂ ಹೆಚ್ಚು ಫುಟ್‌ಬಾಲ್ ಪ್ರಿಯರಿಗೆ ನಿರಾಸೆಯಾಯಿತು. ಕೆಲವು ವಾರಗಳಿಂದ ಇಲ್ಲಿ ಬಿಸಿಲಿನ ತಾಪ ಹೆಚ್ಚಾಗಿತ್ತು. ಶನಿವಾರ ಮಳೆ ಮತ್ತು ಗಾಳಿಯಿಂದಾಗಿ ವಾತಾವರಣ ತಂಪಾಗಿತ್ತು. ಆದರೆ ಫ್ರಾನ್ಸ್ ಮತ್ತು ಅರ್ಜೆಂಟೀನಾ ಪಂದ್ಯವನ್ನು ವೀಕ್ಷಿಸಲು ಬಂದಿದ್ದವರು ಬೇಸರದಿಂದ ವಾ‍ಪಸಾದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.