ರೋಚಕ ಪೆನಾಲ್ಟಿ ಹಣಾಹಣಿ: ಕ್ವಾರ್ಟರ್‌ ಫೈನಲ್‌ಗೆ ಕ್ರೊವೇಷ್ಯಾ ಲಗ್ಗೆ ನಿಜ್ನಿ ನೊವ್‌ಗರೊಡ್‌: ಭಾನುವಾರ ರಾತ್ರಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಮಬಲದ ಹೋರಾಟ ನಡೆಸಿದ ಡೆನ್ಮಾರ್ಕ್ ಮತ್ತು ಕ್ರೊವೇಷ್ಯಾ ಪೆನಾಲ್ಟಿ ಶೂಟ್‌ಔಟ್‌ನಲ್ಲಿಯೂ ಜಿದ್ದಾಜಿದ್ದಿ ಪ್ರದರ್ಶಿಸಿದವು. ಆದರೆ, 3–2 ಗೋಲುಗಳ ಅಂತರದಿಂದ ಕ್ರೊವೇಷ್ಯಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಮಧ್ಯಂತರ ಅವಧಿಯಲ್ಲಿಯೇ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿದವು. ಡೆನ್ಮಾರ್ಕ್‌ ಪರ ಜಾರ್ಜೆನ್ಸನ್‌ 1ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸುವ ಮೂಲಕ ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳಲ್ಲಿ ವಿದ್ಯುತ್‌ ಸಂಚರಿಸುವಂತೆ ಮಾಡಿದರು. ನಾಲ್ಕನೇ ನಿಮಿಷದಲ್ಲಿ ಕ್ರೊವೇಷ್ಯಾ ಪರ ಮಾರಿಯೊ ಮನ್ಜುಕಿಕ್‌ ಗೋಲು ಗಳಿಸಿದರು. ಇದರಿಂದ ಉಭಯ ತಂಡಗಳ ಅಭಿಮಾನಿಗಳಲ್ಲಿ ಕುತೂಹಲ ಇಮ್ಮಡಿಯಾಯಿತು. ಆದರೆ, ಮಧ್ಯಂತರದ ನಂತರವೂ ಎರಡೂ ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಅಧಿಕ ಸಮಯ, ಪೆನಾಲ್ಟಿ ಶೂಟ್‌ಔಟ್‌ನಿಂದ ಪಂದ್ಯ ರೋಚಕ ಘಟ್ಟ ತಲುಪಿತು. 1–1 ಗೋಲುಗಳಿಂದ ಸಮಬಲ ಸಾಧಿಸಿದ್ದ ತಂಡಗಳು, 3–2 ಗೋಲುಗಳೊಂದಿಗೆ ಪಂದ್ಯ ಪೂರ್ಣಗೊಳಿಸಿದವು. ಒಂದೇ ಪಂದ್ಯದಲ್ಲಿ ಉಭಯತಂಡದ ಗೋಲ್‌ ಕೀಪರ್‌ಗಳುಪೆನಾಲ್ಟಿಕಾರ್ನರ್‌ ಅವಕಾಶದಲ್ಲಿ 6 ಬಾರಿ ಚೆಂಡುತಡೆಯುವ ಮೂಲಕ ಮತ್ತೊಂದು ದಾಖಲೆಗೆ ಸೃಷ್ಟಿಸಿದರು.ಡೆನ್ಮಾರ್ಕ್‌ ಮಣಿಸಿದ ಕ್ರೊವೇಷ್ಯಾ ಶನಿವಾರ ರಷ್ಯಾ ಎದುರು ಕ್ವಾರ್ಟರ್‌ ಫೈನಲ್‌ನಲ್ಲಿ ಸೆಣಸಲಿದೆ. . . . . # # ../2gXUciJWiJ Croácia # 1⃣✖️1⃣ # #Copa2018 # ../r1Um14KyUH ! . # # # # #WorldCupRussia2018 #FifaWorldCup2018 ../hTiJLmKy2e ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.