ಜಪಾನ್‌ ತಂಡಕ್ಕೆ ಹೊಸ ಕೋಚ್‌ ನರಿಟಾ, ಜಪಾನ್‌: ‘ಜಪಾನ್ ತಂಡಕ್ಕೆ ಶೀಘ್ರವೇ ಹೊಸ ಕೋಚ್‌ ನೇಮಿಸುತ್ತೇವೆ’ ಎಂದು ಜಪಾನ್‌ ಫುಟ್‌ಬಾಲ್‌ ಸಂಸ್ಥೆಯ (ಜೆಎಫ್‌ಎ) ಅಧ್ಯಕ್ಷ ಕೊಜೊ ತಶಿಮಾ ನುಡಿದಿದ್ದಾರೆ. ಜಪಾನ್‌ ತಂಡ ಈ ಬಾರಿಯ ಫಿಫಾ ವಿಶ್ವಕಪ್‌ನ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬೆಲ್ಜಿಯಂ ಎದುರು ಸೋತಿತ್ತು. ಹೀಗಾಗಿ ಅಕಿರಾ ನಿಶಿನೊ ಅವರನ್ನು ಮುಖ್ಯ ಕೋಚ್‌ ಹುದ್ದೆಯಲ್ಲಿ ಮುಂದುವರಿಸದಿರಲು ಜೆಎಫ್‌ಎ ನಿರ್ಧರಿಸಿದೆ. ಪೋಲೆಂಡ್‌ ಎದುರಿನ ‘ಎಚ್‌’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಜಪಾನ್‌ ಸೋತಿತ್ತು. ಈ ಹೋರಾಟದಲ್ಲಿ ನಿಶಿನೊ ಪರಿಣಾಮಕಾರಿ ಯೋಜನೆ ಹೆಣೆಯಲು ವಿಫಲರಾಗಿದ್ದರು ಎಂದು ಹಲವರು ಟೀಕಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.