ಕ್ರೀಡಾ ಸುದ್ದಿಸಂಸ್ಥೆಗೆ ₹1632 ಕೋಟಿ ದಂಡ ನ್ಯೂಯಾರ್ಕ್‌: ಫುಟ್‌ಬಾಲ್‌ ಸಂಸ್ಥೆಗಳ ಅಧಿಕಾರಿಗಳಿಗೆ ಲಂಚದ ಆಮಿಷ ಒಡ್ಡಿದ ಆರೋಪ ಎದುರಿಸುತ್ತಿರುವ ಫ್ಲಾರಿಡಾದಲ್ಲಿರುವ ಸ್ಪೇನ್‌ನ ಕ್ರೀಡಾ ಸುದ್ದಿ ಸಂಸ್ಥೆಯಾದ ಯು.ಎಸ್‌.ಇಮಾಜಿನಾಗೆ ಫಿಫಾ₹ 1632 ಕೋಟಿ ಮೊತ್ತದ ದಂಡ ವಿಧಿಸಿದೆ. ನ್ಯಾಯಾಧೀಶೆ ಪಮೇಲಾ ಚೆನ್‌ ಅವರ ಸಮಕ್ಷಮದಲ್ಲಿ ಬುಧವಾರ ವಿಚಾರಣೆ ನಡೆಸಿ ದಂಡ ವಿಧಿಸಲಾಗಿದೆ. 2014, 2018 ಮತ್ತು 2022ರ ವಿಶ್ವಕಪ್‌ನ ಮಾಧ್ಯಮ ಮತ್ತು ಮಾರುಕಟ್ಟೆ ಹಕ್ಕುಗಳನ್ನು ಪಡೆಯುವುದ ಕ್ಕಾಗಿ ಸುದ್ದಿ ಸಂಸ್ಥೆಯು ಕೋಸ್ಟರಿಕಾ, ಎಲ್‌ ಸಾಲ್ವಡೋರ್‌, ಗ್ವಾಟೆಮಾಲ, ಹೊಂಡುರಾಸ್ ಮತ್ತು ಕೆರಿಬಿಯನ್ ಫುಟ್‌ಬಾಲ್‌ ಯೂನಿಯನ್‌ ಮುಂತಾದ ಫುಟ್‌ಬಾಲ್ ಸಂಸ್ಥೆಗಳ ಪದಾಧಿಕಾರಿಗಳಿಗೆ ಲಂಚ ನೀಡಲು ಪ್ರಯತ್ನಿಸಿತ್ತು. ದಂಡ ತೆರಲು ಒಪ್ಪಿಕೊಂಡ ಕಾರಣ ಸಂಸ್ಥೆಯ ಮೇಲೆ ಹೆಚ್ಚಿನ ಕ್ರಮ ಕೈಗೊಳ್ಳು ವುದನ್ನು ಕೈಬಿಡಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.