ಇದು ಅತ್ಯುತ್ತಮ ವಿಶ್ವಕಪ್‌: ಜಿಯಾನಿ ಇನ್ಫೆಂಟಿನೊ ಮಾಸ್ಕೊ: ‘ಈ ಬಾರಿಯ ವಿಶ್ವಕಪ್‌, ನಾನು ನೋಡಿದ ಅತ್ಯುತ್ತಮ ಟೂರ್ನಿ’ ಎಂದು ಫಿಫಾ ಅಧ್ಯಕ್ಷ ಜಿಯಾನಿ ಇನ್ಫೆಂಟಿನೊ ಸಂತಸ ವ್ಯಕ್ತಪಡಿಸಿದರು. ‘ಈ ಸಲ ನಡೆಯುವ ವಿಶ್ವಕಪ್‌ ಅನೇಕ ಸ್ತರಗಳಲ್ಲಿ ಶ್ರೇಷ್ಠವಾಗಲಿದೆ ಎಂದು ಟೂರ್ನಿಯ ಆರಂಭದ ಮುನ್ನ ಹೇಳಿದ್ದೆ. ಈಗ ಇದು ಸಾಬೀತಾಗಿದೆ. ಇಷ್ಟು ಅಚ್ಚುಕಟ್ಟಾಗಿ ಟೂರ್ನಿಯನ್ನು ಆಯೋಜಿಸಿದ ರಷ್ಯಾಗೆ ಅಭಿನಂದನೆ. ರಷ್ಯಾವನ್ನು ವಿಶ್ವ ಈಗ ಭಿನ್ನವಾಗಿ ನೋಡಲಿದೆ’ ಎಂದು ಅವರು ಇಲ್ಲಿನ ಸುದ್ದಿಗಾರರಿಗೆ ಹೇಳಿದ್ದಾರೆ. ಕಳೆದ ವಾರ ಇಲ್ಲಿನ ಪ್ರತಿಷ್ಠಿತ ಕ್ರೆಮ್ಲಿನ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರನ್ನು ಭೇಟಿಯಾಗಿದ್ದ ಜಿಯಾನಿ, ‘ಜಗತ್ತು ರಷ್ಯಾ ದೇಶವನ್ನು ಪ್ರೀತಿಸುತ್ತಿದೆ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.