ಐಫೆಲ್‌ ಟವರ್‌ನೆತ್ತರ ಮೀರಿದ ಫುಟ್‌ಬಾಲ್ ಪ್ರೀತಿ ಮಾಸ್ಕೊ: ಎರಡನೇ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯಲು ಕಾತರವಾಗಿರುವ ಫ್ರಾನ್ಸ್ ದೇಶವು ಭಾನುವಾರ ನಡೆಯುವ ಫೈನಲ್‌ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಸಕಲ ರೀತಿಯಲ್ಲಿ ಸಿದ್ಧಗೊಂಡಿದೆ. 2016ರ ಯುರೋ ಕಪ್‌ನ ಫೈನಲ್‌ನಲ್ಲಿ ಪೋರ್ಚುಗಲ್‌ ವಿರುದ್ಧ ಅನುಭವಿಸಿದ ಸೋಲಿನ ಕಹಿಯನ್ನು ಮರೆಯಲು ಫ್ರಾನ್ಸ್‌ನ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗಲೇ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡವಾಗಿ ಫ್ರಾನ್ಸ್‌ ಹೊರಹೊಮ್ಮಿದೆ. 1998ರಲ್ಲಿ ಫ್ರಾನ್ಸ್‌ ತಂಡ ವಿಶ್ವಕಪ್‌ ಗೆದ್ದಿತ್ತು. ಜಿನೆದಿನ್‌ ಜಿದಾನ್‌ ನೇತೃತ್ವದ ತಂಡ ಅಂದು ಬರೆದಿದ್ದ ಇತಿಹಾಸವನ್ನು ಪುನರಾವರ್ತಿಸಲು ಡೀಡಿ ಡೆಶಾಂಪ್ಸ್‌ ಪಡೆ ತಯಾರಾಗಿದೆ. ತಾನು ಕಪ್ಪು ಕುದುರೆ ಅಲ್ಲ ಎಂದು ಸಾಬೀತು ಮಾಡಿ ರುವ ಕ್ರೊವೇಷ್ಯಾ ತಂಡವನ್ನು ಫ್ರಾನ್ಸ್‌ ಎದುರಿಸಲಿದೆ. 80,000 ಆಸನ ಸಾಮರ್ಥ್ಯ ಹೊಂದಿರುವ ಲುಜ್‌ನಿಕಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಪ್ಯಾರಿಸ್‌ನಲ್ಲಿ ಪೋಲಿಸರ ಸರ್ಪಗಾವಲು: ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಅತ್ತ ರಷ್ಯಾ ಸಿದ್ಧಗೊಳ್ಳುತ್ತಿದ್ದರೆ, ಇತ್ತ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಭದ್ರತೆಗಾಗಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಫ್ರಾನ್ಸ್‌ ವಿಶ್ವಕಪ್‌ ಗೆದ್ದರೆ ಲಕ್ಷಾಂತರ ಜನರು ಪ್ಯಾರಿಸ್‌ ಹಾಗೂ ಸುತ್ತಲಿನ ನಗರಗಳ ಬೀದಿಗಳಿಗೆ ದಾಂಗುಡಿ ಇಡಲಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿ ಸಲು ಫ್ರಾನ್ಸ್‌ ಸರ್ಕಾರ 12 ಸಾವಿರ ಪೊಲೀಸರನ್ನು ನಿಯೋಜಿಸಿದೆ. ಭಯೋ ತ್ಪಾದಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿ ಸದಿರಲು ಭದ್ರತಾ ಪಡೆ ಗಳನ್ನು ಪ್ರಮುಖ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.