ಫುಟ್‌ಬಾಲ್‌ | ರೆಫ್ರಿಯನ್ನು ತಳ್ಳಿದ ಆಟಗಾರನಿಗೆ 3 ಪಂದ್ಯ ನಿಷೇದ ₹15 ಲಕ್ಷ ದಂಡ ಮಿಲಾನ್‌: ಇಟಾಲಿಯನ್‌ ಫುಟ್‌ಬಾಲ್‌ ಲೀಗ್‌ನಲ್ಲಿ ರೆಫ್ರಿಯನ್ನು ತಳ್ಳುವ ಮೂಲಕ ಅಶಿಸ್ತು ತೋರಿದಫ್ಲೋರೆಂಟಿನಾ ತಂಡದಮಿಡ್ಲ್‌ಫೀಲ್ಡರ್‌ ಫ್ರಾಂಕ್‌ ರಿಬೆರಿಗೆ ಮೂರು ಪಂದ್ಯಗಳ ನಿಷೇದ ಹಾಗೂ ₹ 15.71 ಲಕ್ಷ ದಂಡ ಹಾಕಲಾಗಿದೆ.‌ ಭಾನುವಾರ ನಡೆದ ಈ ಪಂದ್ಯದಲ್ಲಿಫ್ಲೋರೆಂಟಿನಾ ತಂಡ ಲಾಝಿವೊ ಎದುರು 2–1 ಗೋಲು ಅಂತರದಿಂದ ಸೋಲು ಕಂಡಿದೆ. ಪಂದ್ಯದ ವೇಳೆ ಸಹಾಯಕ ರೆಫ್ರಿಯನ್ನು ಎರಡು ಸಲ ತಳ್ಳಿದ ರಿಬೆರಿಗೆ ರೆಡ್‌ಕಾರ್ಡ್‌ ನೀಡಲಾಗಿತ್ತು. ಘಟನೆ ಸಂಬಂಧಕ್ರಮ ಕೈಗೊಂಡಿರುವ ಇಟಾಲಿಯಿನ್‌ ಲೀಗ್‌ ಶಿಸ್ತುಪಾಲನಾ ಸಮಿತಿಯು, ಸಹಾಯಕ ರೆಫ್ರಿಯೊಂದಿಗೆ ಅಗೌರವದಿಂದ ನಡೆದುಕೊಂಡ ಕಾರಣ ರಿಬೆರಿಗೆ ಮೂರು ಪಂದ್ಯಗಳ ನಿಷೇದ ಹೇರಿ, ದಂಡ ವಿಧಿಸಿದೆ. ಕೊನೆಯ 15 ನಿಮಿಷಗಳ ಆಟ ಬಾಕಿ ಇದ್ದಾಗ ಎರಡೂ ತಂಡಗಳು 1–1 ಸಮಬಲ ಸಾಧಿಸಿದ್ದವು. ಈ ವೇಳೆಲಾಝಿವೊ ಬದಲಿ ಆಟಗಾರನ ಮೊರೆ ಹೋಗಿತ್ತು. ಆಗ ಕುಪಿತಗೊಂಡ ರಿಬೆರಿ ರೆಫ್ರಿ ಜೊತೆ ವಾದ ನಡೆಸಿದ್ದರು. ಮುಂದುವರಿದಂತೆ ಲಾಝಿವೋ ತಂಡದವರೂ ರೆಫ್ರಿ ಜೊತೆ ವಾಗ್ವಾದಕ್ಕಿಳಿದರು. ಆಗ ರೆಫ್ರಿಯನ್ನು ತಳ್ಳಿದ್ದರು. .... ?# ../hjYorg6SOv ಶಿಸ್ತು ಕ್ರಮದ ಸುದ್ದಿ ಹರಿದಾಡುತ್ತಿದ್ದಂತೆ ರಿಬೆರಿ ಪ್ರಕರಣ ಸಂಬಂಧ ಕ್ಷಮೆಕೋರಿದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳಲ್ಲಿಫ್ರಾನ್ಸ್‌ ತಂಡವನ್ನು ಪ್ರತಿನಿಧಿಸಿದ್ದ ರಿಬೆರಿ, ‘ಕಳೆದ ರಾತ್ರಿ ನಡೆದ ಘಟನೆ ಬಗ್ಗೆ ಮರುಕ ವ್ಯಕ್ತಪಡಿಸುತ್ತೇನೆ. ನನ್ನ ತಂಡದ ಸಹ ಆಟಗಾರರು, ಕೋಚ್‌ ಹಾಗೂ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ. ಮಿಸ್ಟರ್‌ ಪಸ್ಸೇರಿ (ರೆಫ್ರಿ)ಅವರಲ್ಲಿಯೂ ಕ್ಷಮೆ ಯಾಚಿಸುತ್ತೇನೆ. ಯಾಕೆಂದರೆ ರಾತ್ರಿ ಅವರು ಕೊನೆಯ ಶೀಟಿ ಊದಿದಾಗ ನಾನು ವಿಚಲಿತನಾಗಿದ್ದೆ ಮತ್ತು ಅಸಮಾಧಾನಗೊಂಡಿದ್ದೆ. ಅವರು ನನ್ನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲರು ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.