ಚೆಟ್ರಿ, ಕಮಲಾದೇವಿ ವರ್ಷದ ಆಟಗಾರರು ಮುಂಬೈ: ಭಾರತ ಫುಟ್‌ ಬಾಲ್‌ ತಂಡದ ನಾಯಕ ಸುನಿಲ್ ಚೆಟ್ರಿ ಅವರು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ಕಳೆದ ಸಾಲಿನ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಮಲಾ ದೇವಿ ಮಹಿಳಾ ವಿಭಾಗದ ಪ್ರಶಸ್ತಿ ಗಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ನಾಲ್ಕು ರಾಷ್ಟ್ರಗಳ ಫುಟ್‌ಬಾಲ್‌ ಟೂರ್ನಿ ಯಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನಿರುದ್ಧ ತಾಪ ಅವರನ್ನು ಕಳೆದ ಸಾಲಿನ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಮಹಿಳೆಯರಿಗೆ ಈ ವಿಭಾಗದದಲ್ಲಿ ನೀಡುವ ಪ್ರಶಸ್ತಿಗೆ ಇ.ಪಂಥೋಯಿ ಆಯ್ಕೆಯಾಗಿದ್ದಾರೆ. ಫುಟ್‌ಬಾಲ್ ಬೆಳವಣಿಗೆಗೆ ಉತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿ ಕೇರಳ ಫುಟ್‌ಬಾಲ್ ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ. ಉತ್ತಮ ರೆಫರಿಯಾಗಿ ಸಿ.ಆರ್.ಶ್ರೀಕೃಷ್ಣ ಮತ್ತು ಉತ್ತಮ ಸಹಾಯಕ ರೆಫರಿ ಪ್ರಶಸ್ತಿಗೆ ಸುಮಂತಾ ದತ್ತ ಆಯ್ಕೆಯಾಗಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.