ಐಸ್‌ಲ್ಯಾಂಡ್‌ ಫುಟ್‌ಬಾಲ್‌ ಕೋಚ್‌ ರಾಜೀನಾಮೆ ರೇಕೆವಿಕ್, ಐಸ್‌ಲ್ಯಾಂಡ್‌ : ಐಸ್‌ಲ್ಯಾಂಡ್‌ ಫುಟ್‌ಬಾಲ್‌ ತಂಡದ ತರಬೇತುದಾರ ಹೀಮಿರ್‌ ಹಾಲ್‌ಗ್ರಿಮ್ಸನ್‌ ಅವರು ಮಂಗಳವಾರ ರಾಜೀನಾಮೆ ನೀಡಿದ್ದಾರೆ. ‘ಏಳು ವರ್ಷಗಳ ಕಾಲ ತಂಡದ ಮಾರ್ಗದರ್ಶಕರಾಗಿದ್ದ ಹೀಮಿರ್‌ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ’ ಎಂದು ಐಸ್‌ಲ್ಯಾಂಡ್‌ ಫುಟ್‌ಬಾಲ್‌ ಮಂಡಳಿಯು ತಿಳಿಸಿದೆ. ದಂತವೈದ್ಯರಾಗಿರುವ ಹೀಮಿರ್‌ ಅವರು 2011ರಲ್ಲಿ ತಂಡದ ಸಹಾಯಕ ತರಬೇತುದಾರರಾಗಿ ನೇಮಕಗೊಂಡಿದ್ದರು. 2016ರ ಯುರೋ ಕಪ್ ಚಾಂಪಿಯನ್‌ಷಿಪ್‌ ನಂತರ ತಂಡದ ಮುಖ್ಯ ಕೋಚ್‌ ಹುದ್ದೆಗೆ ಏರಿದ್ದರು. ಐಸ್‌ಲ್ಯಾಂಡ್‌, ಈ ಬಾರಿ ಮೊದಲ ಸಲ ವಿಶ್ವಕಪ್‌ನಲ್ಲಿ ಆಡಿತ್ತು. ಸಾಧಾರಣ ತಂಡ ಎಂದು ಕರೆಸಿಕೊಂಡಿದ್ದ ಅದು, ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ವಿರುದ್ಧ ಡ್ರಾ ಮಾಡಿಕೊಂಡಿತ್ತು. ಆದರೆ, ಲೀಗ್‌ ಹಂತದ ಮುಂದಿನ ಪಂದ್ಯಗಳಲ್ಲಿ ಅದೇ ರೀತಿಯ ಸಾಮರ್ಥ್ಯ ತೋರಲು ವಿಫಲವಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.