ಬೆನ್ನುನೋವಿನಲ್ಲೇ ಆಡಿದ ಬಾಪೆ ಪ್ಯಾರಿಸ್‌: ‘ತೀವ್ರ ಬೆನ್ನುನೋವಿನ ನಡುವೆಯೂ ಫಿಫಾ ವಿಶ್ವಕಪ್‌ನಲ್ಲಿ ಫೈನಲ್‌ ಪಂದ್ಯದಲ್ಲಿ ಆಡಿದೆ’ ಎಂದು ಫ್ರಾನ್ಸ್‌ ಫುಟ್‌ಬಾಲ್‌ ತಂಡದ ಕೈಲಿಯನ್‌ ಬಾಪೆ ಹೇಳಿದ್ದಾರೆ. ಫುಟ್‌ಬಾಲ್‌ಗೆ ಸಂಬಂಧಿಸಿದ ಫ್ರಾನ್ಸ್‌ನ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ‘ಸೆಮಿಫೈನಲ್‌ ಪಂದ್ಯಕ್ಕೂ ಮುನ್ನ ನನ್ನ ಬೆನ್ನುಹುರಿಗೆ ತೀವ್ರವಾದ ಗಾಯವಾಗಿತ್ತು. ತಂಡದ ಸಿಬ್ಬಂದಿ ಹಾಗೂ ಆಟಗಾ ರರಿಗೆ ಈ ಬಗ್ಗೆ ತಿಳಿಸಲಿಲ್ಲ. ಹಾಗೆಯೇ, ಈ ಕುರಿತು ಯಾವುದೇ ರೀತಿಯ ಸುದ್ದಿ ಹೊರಬೀಳದಂತೆ ಎಚ್ಚರ ವಹಿಸಿದೆ. ಇಲ್ಲದಿದ್ದರೆ, ಎದುರಾಳಿ ತಂಡದ ಆಟಗಾರರು ಪಂದ್ಯದ ವೇಳೆ ಈ ದೈಹಿಕ ವೈಫಲ್ಯವನ್ನೇ ಮುಂದಿಟ್ಟುಕೊಂಡು ನನ್ನನ್ನು ಗುರಿ ಮಾಡುತ್ತಿದ್ದರು. ’ ಎಂದು ಬಾಪೆ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.