ಕತಾರ್‌ಗೆ ಚೆಂಡು ಹಸ್ತಾಂತರಿಸಿದ ಪುಟಿನ್‌ ಮಾಸ್ಕೊ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಚೆಂಡನ್ನು ಮುಂದಿನ ಟೂರ್ನಿ ನಡೆಯಲಿರುವ ಕತಾರ್‌ ಆಡಳಿತಕ್ಕೆ ಹಸ್ತಾಂತರಿಸಿದರು. ಕ್ರೆಮ್ಲಿನ್‌ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಶೇಕ್‌ ತಮೀಮ್ ಬಿನ್ ಹಮದ್‌ ಅಲ್‌ ಥಾನಿ ಮತ್ತು ಫಿಫಾ ಅಧ್ಯಕ್ಷ ಜಿಯಾನಿ ಇನ್ಫೆಂಟಿನೊ ಭಾಗವಹಿಸಿದ್ದರು. ‘ರಷ್ಯಾದಲ್ಲಿ ವಿಶ್ವಕಪ್‌ ಟೂರ್ನಿ ಯಶಸ್ವಿಯಾಗಿ ನಡೆದಿದೆ. ಕತಾರ್‌ನಲ್ಲೂ ಇದೇ ರೀತಿಯ ವಾತಾವರಣ ಸೃಷ್ಟಿಸಲು ಅಲ್ಲಿನ ಆಡಳಿತಕ್ಕೆ ಸಾಧ್ಯವಾಗಲಿದೆ ಎಂಬ ಭರವಸೆ ಇದೆ’ ಎಂದು ಪುಟಿನ್‌ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.