ಮ್ಯಾಂಡ್‌ಜುಕಿಚ್‌ ವಿದಾಯ ಕ್ರೊವೇಷ್ಯಾ: ಕ್ರೊವೇಷ್ಯಾ ತಂಡದ ಸ್ಟ್ರೈಕರ್‌ ಮರಿಯೊ ಮ್ಯಾಂಡ್‌ಜುಕಿಚ್‌, ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಬುಧವಾರ ವಿದಾಯ ಹೇಳಿದ್ದಾರೆ. 2007ರಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದ ಮರಿಯೊ, ಕ್ರೊವೇಷ್ಯಾ ಪರ 89 ಪಂದ್ಯಗಳನ್ನು ಆಡಿ 33 ಗೋಲು ದಾಖಲಿಸಿದ್ದಾರೆ. ಹೋದ ತಿಂಗಳು ರಷ್ಯಾದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ನಲ್ಲಿ ಕ್ರೊವೇಷ್ಯಾ ತಂಡ ಫೈನಲ್‌ ಪ್ರವೇಶಿಸುವಲ್ಲಿ ಮ್ಯಾಂಡ್‌ಜುಕಿಚ್‌ ಪಾತ್ರ ಮಹತ್ವದ್ದೆನಿಸಿತ್ತು. ಅವರು ಟೂರ್ನಿಯಲ್ಲಿ ಮೂರು ಗೋಲು ಬಾರಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.