96ನೇ ಸ್ಥಾನಕ್ಕೇರಿದ ಭಾರತ ಫುಟ್‌ಬಾಲ್‌ ತಂಡ ನವದೆಹಲಿ: ಫಿಫಾ ವಿಶ್ವ ರ‍್ಯಾಂಕಿಂಗ್‌ನಲ್ಲಿ ಭಾರತ ಫುಟ್‌ಬಾಲ್ ತಂಡ ಗುರುವಾರ ಒಂದು ಸ್ಥಾನದ ಏರಿಕೆ ಕಂಡಿದ್ದು 96ನೇ ಸ್ಥಾನ ಗಳಿಸಿದೆ. ಕಳೆದ ವಾರ ಬಿಡುಗಡೆಗೊಂಡಿದ್ದ ರ‍್ಯಾಂಕಿಂಗ್ ಪಟ್ಟಿಯಲ್ಲಿ 97ನೇ ಸ್ಥಾನದಲ್ಲಿದ್ದ ಭಾರತ ತಂಡ ಈಗ ಜಾರ್ಜಿಯಾ ಜೊತೆ ಸ್ಥಾನ ಹಂಚಿಕೊಂಡಿದೆ. ಮುಂದಿನ ತಿಂಗಳು ಬಾಂಗ್ಲಾದೇಶದಲ್ಲಿ ನಡೆಯಲಿರುವ ಸ್ಯಾಫ್ ಕಪ್‌ ಟೂರ್ನಿಗೆ ಸ್ಟೀಫನ್ ಕಾನ್‌ಸ್ಟಂಟೈನ್‌ ಮಾರ್ಗದರ್ಶನದಲ್ಲಿ ಪಳಗಿದ ಆಟಗಾರರು ಸಜ್ಜಾಗುತ್ತಿದ್ದಾರೆ. ಟೂರ್ನಿಯಲ್ಲಿ ಕಳೆದ ಬಾರಿ ಚಾಂಪಿಯನ್ ಆಗಿದ್ದ ತಂಡ ಈ ಬಾರಿ ‘ಬಿ’ ಗುಂಪಿನಲ್ಲಿದೆ. ಶ್ರೀಲಂಕಾ ಮತ್ತು ಮಾಲ್ಡಿವ್ಸ್‌ ಗುಂಪಿನಲ್ಲಿರುವ ಇತರ ತಂಡಗಳು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.