ಇಸ್ತಾಂಬುಲ್‌ ಕಪ್‌: ಭಾರತ–ಓಮನ್‌ ಸೆಣಸು ನವದೆಹಲಿ: ಹದಿನಾರು ವರ್ಷದೊಳಗಿನ ಭಾರತ ಫುಟ್‌ಬಾಲ್‌ ತಂಡವು ಟರ್ಕಿಯಲ್ಲಿ ನಡೆಯಲಿರುವ ಇಸ್ತಾಂಬುಲ್‌ ಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಓಮನ್‌ ಅನ್ನು ಎದುರಿಸಲಿದೆ. ಇದೇ ತಿಂಗಳ 20ರಂದು ಈ ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. 22ರಂದು ನಡೆಯುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ಟರ್ಕಿ ತಂಡದೊಂದಿಗೆ ಸೆಣಸಲಿದೆ. 25ರಂದುಟರ್ಕಿಯ ಬೆಸಿಕ್ತಾಸ್‌ ಕ್ಲಬ್‌ ಎದುರು ಅಭ್ಯಾಸ ಪಂದ್ಯವನ್ನು ಆಡಲಿದೆ. ಮುಂದಿನ ತಿಂಗಳು ನಡೆಯುವ ಎಎಫ್‌ಸಿ (ಏಷ್ಯಾ ಫುಟ್‌ಬಾಲ್‌ ಕಾನ್ಫೆಡರೇಷನ್‌) ಚಾಂಪಿಯನ್‌ಷಿಪ್‌ಗೆ ಪೂರ್ವಸಿದ್ಧತೆಗಾಗಿ ಭಾರತ ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. ಇತ್ತೀಚೆಗೆ ನಡೆದ ಡಬ್ಲ್ಯುಎಎಫ್‌ಎಫ್‌ (ವೆಸ್ಟ್‌ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌) ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವು ರನ್ನರ್‌ ಅಪ್‌ ಆಗಿತ್ತು.ಭಾರತ ತಂಡವು ಈ ವರ್ಷದ ಆರಂಭದಿಂದ ಒಟ್ಟು 19 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.