ಸೆ. 2ರಂದು ಈಸ್ಟ್‌ ಬೆಂಗಾಲ್‌–ಮೋಹನ್‌ ಬಾಗನ್‌ ಹಣಾಹಣಿ ಕೋಲ್ಕತ್ತ: ಈ ಋತುವಿನ ಫುಟ್‌ಬಾಲ್‌ ಲೀಗ್‌ ಪ್ರೀಮಿಯರ್‌ ಡಿವಿಷನ್‌ ಟೂರ್ನಿಯಲ್ಲಿ ಕುತೂಹಲ ಕೆರಳಿಸಿರುವ ಈಸ್ಟ್‌ ಬೆಂಗಾಲ್‌ ಹಾಗೂ ಮೋಹನ್‌ ಬಾಗನ್‌ ತಂಡಗಳ ನಡುವಿನ ಮೊದಲ ಡರ್ಬಿ ಪಂದ್ಯ ಸೆ‍ಪ್ಟೆಂಬರ್‌ ಎರಡರಂದು ನಡೆಯಲಿದೆ. ಈಸ್ಟ್‌ ಬೆಂಗಾಲ್‌ ಹಾಗೂ ಮೊಹಮ್ಮದನ್‌ ಸ್ಪೋರ್ಟಿಂಗ್‌ ಕ್ಲಬ್‌ಗಳ ನಡುವಿನ ಪಂದ್ಯವು ಸೆಪ್ಟೆಂಬರ್‌ 9ರಂದು ಜರುಗಲಿದೆ. ಮೋಹನ್‌ ಬಾಗನ್‌ ಹಾಗೂ ಮೊಹಮ್ಮದನ್‌ ಸ್ಪೋರ್ಟಿಂಗ್‌ ಕ್ಲಬ್‌ಗಳ ನಡುವಿನ ಹಣಾಹಣಿಯು ಸೆಪ್ಟೆಂಬರ್‌ 16ರಂದು ನಡೆಯಲಿದೆ. ಈ ಎಲ್ಲ ಪಂದ್ಯಗಳು ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ಜಗುಗಲಿವೆ. ಹಿಂದಿನ ಋತುವಿನಲ್ಲಿ ಈಸ್ಟ್‌ ಬೆಂಗಾಲ್‌ ತಂಡವು ಟೂರ್ನಿಯ ಚಾಂಪಿಯನ್‌ ಆಗಿತ್ತು. ಇದೇ ಶುಕ್ರವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಈಸ್ಟ್‌ ಬೆಂಗಾಲ್‌ ತಂಡವು ಟೊಲಿಗಂಗ್‌ ಅಗ್ರಗಾಮಿ ತಂಡದೊಂದಿಗೆ ಸೆಣಸಲಿದೆ. ಶನಿವಾರ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಮೋಹನ್‌ ಬಾಗನ್‌ ತಂಡವು ಪತಚಕ್ರಾ ತಂಡವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.