ಬಾಂಗ್ಲಾ ಶಾಲಾ ತಂಡಕ್ಕೆ ಗೆಲುವು ನವದೆಹಲಿ: ಬಾಂಗ್ಲಾದೇಶದ ಕ್ರಿರಾ ಶಿಕ್ಷಾ ಪ್ರೊತಿಸ್ತಾನ ತಂಡಸುಬ್ರತೊ ಕಪ್‌ ಫುಟ್‌ಬಾಲ್‌ ಟೂರ್ನಿಯ (17 ವರ್ಷದವರು) ಪಂದ್ಯದಲ್ಲಿ ನವದೆಹಲಿ ಏರ್‌ಫೋರ್ಸ್‌ ಶಾಲಾ ತಂಡವನ್ನು 11–0 ಗೋಲುಗಳಿಂದ ಮಣಿಸಿದೆ. ಭಾನುವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ 11 ಗೂರ್ಖಾ ರೈಫಲ್ಸ್ ರೆಜಿ ಮೆಂಟಲ್‌ ಕೇಂದ್ರ ತಂಡ ಇಂಫಾಲ್‌ ಸೈನಿಕ ಶಾಲಾ ತಂಡವನ್ನು 12–1ರಿಂದ, ‘ಬಿ’ ಗುಂಪಿನ ಪಂದ್ಯದಲ್ಲಿ ತ್ರಿಪುರ ಕ್ರೀಡಾ ಶಾಲಾ ತಂಡ ಭೋಪಾಲ್‌ ಸೈನಿಕ ಶಾಲಾ ತಂಡವನ್ನು 8–0 ಗೋಲುಗಳಿಂದ ಸೋಲಿಸಿದವು. ಗುಂಪು ‘ಇ’ ನಲ್ಲಿ ಮಲಪ್ಪುರಂ ಎನ್‌ಎನ್‌ಎಂ ಎಚ್‌ಎಸ್ಎ‌ಸ್‌ ತಂಡವು ನವದೆಹಲಿಯ ಶ್ರೀರಾಂ ಶಾಲಾ ತಂಡವನ್ನು 12–3 ಗೋಲುಗಳಿಂದ ಮಣಿಸಿ ಸಂಭ್ರಮಿಸಿತು. ಎರಡೂ ಅವಧಿಯಲ್ಲೂ ವಿಜೇತ ತಂಡ ಮಿಂಚಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.