ಬಾರ್ಸಿಲೋನ ತಂಡಕ್ಕೆ ಮೆಸ್ಸಿ ನಾಯಕ ಬಾರ್ಸಿಲೋನ : ಅರ್ಜೆಂಟೀನಾದ ಹಿರಿಯ ಫುಟ್‌ಬಾಲ್ ಆಟಗಾರ ಲಯೊನೆಲ್ ಮೆಸ್ಸಿ ಈ ಋತುವಿನಲ್ಲಿ ಬಾರ್ಸಿಲೋನ ತಂಡವನ್ನು ಮುನ್ನಡೆಸಲಿದ್ದಾರೆ. ಸರ್ಜಿಯೊ ಬಾಸ್ಕ್ವೆಟ್‌ ಮತ್ತು ಜೆರಾಲ್ಡ್‌ ಪೀಕ್‌ ಉಪನಾಯಕರಾಗಿ ಕಾರ್ಯನಿರ್ವಹಿಸುವರು. ಭಾನುವಾರ ಆರಂಭವಾಗಲಿರುವ ಸ್ಪಾನಿಷ್ ಸೂಪರ್ ಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾರ್ಸಿಲೋನ ತಂಡ ಸೆವಿಲ್ಲಾವನ್ನು ಎದುರಿಸಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.